ಹೈದರಾಬಾದ್: ವೈಎಸ್‌ಆರ್‌ಸಿಪಿಯ ಮತ್ತೊಬ್ಬ ರಾಜ್ಯಸಭಾ ಸದಸ್ಯ ಆರ್ ಕೃಷ್ಣಯ್ಯ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜಗನ್ ಮೋಹನ್ ರೆಡ್ಡಿಯವರಿಗೆ ತೀರ್ವ ಹಿನ್ನಡೆಯಾದಂತಾಗಿದೆ. ಕಳೆದ ತಿಂಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಮೋಪಿದೇವಿ ವೆಂಕಟರಮಣ ಮತ್ತು ಬೀಡಾ ಮಸ್ತಾನ್ ರಾವ್ ನಂತರ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮೂರನೇ ವೈಎಸ್‌ಆರ್‌ಸಿಪಿ ಸಂಸದ ಆರ್.ಕೃಷ್ಣಯ್ಯ ಅವರಾಗಿದ್ದಾರೆ.
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
ಪಕ್ಷಾಂತರ ಪರ್ವ ಆರಂಭವಾಗುವ ಮುನ್ನ ವೈಎಸ್‌ಆರ್‌ಸಿಪಿಯು ರಾಜ್ಯಸಭೆಯಲ್ಲಿ ಒಟ್ಟು 11 ಸದಸ್ಯರನ್ನು ಹೊಂದಿತ್ತು. ಆಡಳಿತಾರೂಢ ಟಿಡಿಪಿ ಮೇಲ್ಮನೆಯಲ್ಲಿ ಒಬ್ಬ ಸಂಸದರೂ ಇಲ್ಲ. ವೈಎಸ್‌ಆರ್‌ಸಿಪಿ ಸಂಸದರ ರಾಜೀನಾಮೆ ಆಂಧ್ರಪ್ರದೇಶದಲ್ಲಿ ಉಪಚುನಾವಣೆ ನಂತರ ಎನ್‌ಡಿಎ ಮಿತ್ರಪಕ್ಷಗಳಿಗೆ ರಾಜ್ಯಸಭೆಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಲಿದೆ.
ಆರ್ ಕೃಷ್ಣಯ್ಯ ತೆಲಂಗಾಣ ಮತ್ತು ಹೈದರಾಬಾದ್ ರಾಜ್ಯಗಳಲ್ಲಿ ಪ್ರಬಲ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ. ಮಾಜಿ ಶಾಸಕರೂ ಆಗಿರುವ ಇವರಿಗೆ ಪಕ್ಷಾಂತರ ಹೊಸದಲ್ಲ. ಅವರು BRS ಗೆ ಸೇರುವ ಮೊದಲು 2014ರಲ್ಲಿ ತೆಲಂಗಾಣಕ್ಕೆ TDP ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. 2022ರಲ್ಲಿ ಆಂಧ್ರ ಪ್ರದೇಶದಿಂದ YSRCP ಸಂಸದರಾದರು. ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಭರವಸೆಯಿಂದ ಜಗನ್ ಮೋಹನ್ ರೆಡ್ಡಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.
ಕೃಷ್ಣಯ್ಯ ಅವರ ಅಧಿಕಾರಾವಧಿಗೆ ಇನ್ನೂ ನಾಲ್ಕು ವರ್ಷ ಬಾಕಿ ಇತ್ತು. ಇದೀಗ ಅವರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ನಿರೀಕ್ಷೆ ಇದೆ.




