ಮಂಗಳೂರು ವಿ ವಿ ಉಪ ಕುಲಪತಿ ಸ್ಥಾನಕ್ಕೆ ಹಿರಿಯ ವಿದ್ವಾಂಸ ಪ್ರೊ. ಮುಜ಼ಾಫರ್ ಅಸ್ಸಾದಿ ಹೆಸರನ್ನು ಸೂಚಿಸಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಪ್ರಸ್ತಾವನೆ ಕಳುಹಿಸಿತ್ತು. ರಾಜ್ಯಪಾಲರು ಅಸ್ಸಾದಿ ಹೆಸರಿದ್ದ ಫೈಲ್ ಅನ್ನು ಸಕಾರಣವಿಲ್ಲದೆ ವಾಪಾಸು ಕಳುಹಿಸಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ರಾಜ್ಯ ಸರಕಾರ ರಾಜ್ಯಪಾಲರ ಈ ಅಪ್ರಜಾಸತ್ತಾತ್ಮಕ ನಡೆಯನ್ನು ಒಪ್ಪದೆ ಮತ್ತೊಮ್ಮೆ ಅಸ್ಸಾದಿ ಹೆಸರನ್ನು ಸೂಚಿಸಿ ಫೈಲ್ ಅನ್ನು ರಾಜಭವನಕ್ಕೆ ಕಳುಹಿಸಬೇಕಿತ್ತು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ರಾಜ್ಯ ಸರಕಾರದ ಮೇಲೆ ಸವಾರಿ ಮಾಡುವುದನ್ನು ಬಲವಾಗಿ ವಿರೋಧಿಸಬೇಕಿತ್ತು. ಕೇರಳ, ತಮಿಳ್ನಾಡಿನ ಸರಕಾರಗಳ ಮಾದರಿಯಲ್ಲಿ ರಾಜ್ಯ ಪಾಲರು “ಲಕ್ಷ್ಮಣ ರೇಖೆ” ದಾಟುತ್ತಿರುವುದರ ವಿರುದ್ದ ಪ್ರಬಲ ಹೋರಾಟಕ್ಕಿಳಿಯಬೇಕಿತ್ತು.
ಆದರೆ, ಕರ್ನಾಟಕದ ಸಿದ್ದರಾಮಯ್ಯ ಸರಕಾರ ಆ ರೀತಿ ಮಾಡಲಿಲ್ಲ. ರಾಜ್ಯಪಾಲರು ವಾಪಾಸ್ ಕಳುಹಿಸಿದ ಅಸ್ಸಾದಿ ಹೆಸರಿದ್ದ ಫೈಲ್ ಅನ್ನು ಕೈ ಬಿಟ್ಟಿತು. (ಸರಕಾರ ಮತ್ತೊಮ್ಮೆ ಪ್ರೊ ಅಸ್ಸಾದಿ ಹೆಸರನ್ನು ಸೂಚಿಸಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಿದ್ದರೆ ರಾಜ್ಯಪಾಲರೊ ಇಕ್ಕಟ್ಟಿಗೆ ಸಿಲುಕುತ್ತಿದ್ದರು) ರಾಜ್ಯಪಾಲರು ಸೂಚಿಸಿದ (ಆಯ್ಕೆ ಮಾಡಿದ) ಹೆಸರನ್ನು ಮಂಗಳೂರಿನ ವಿ ವಿ ಉಪ ಕುಲಪತಿಯಾಗಿ ಒಪ್ಪಿಕೊಂಡಿತು. ಆ ಮೂಲಕ ಮೋದಿ, ಶಾರ ಕೇಂದ್ರದ ಕೋಮುವಾದಿ ಏಜಂಟ್ ತರ ವರ್ತಿಸಿದ ಗವರ್ನರ್ ಅವರು “ನೈಸಾಗಿ” ಮಾಡಿದ ಖಾಸಗಿ ವಿನಂತಿಗೆ ಮಣಿಯಿತು. ಅದರ ಪರಿಣಾಮ ರಾಜ್ಯಪಾಲರು ಇಂದು ಸಿದ್ದರಾಮಾಯ್ಯರ ತಲೆದಂಡವನ್ನು ನಿಯಮವನ್ನು ಉಲ್ಲಂಘಿಸಿ, ಕೇಂದ್ರದ ಆದೇಶದಂತೆ ಪಡೆಯುವವರೆಗೆ ಬಂದು ನಿಂತಿದೆ.
ಕೇರಳದ ಪಿಣರಾಯಿ ವಿಜಯನ್, ತಮಿಳುನಾಡಿನ ಸ್ಟಾಲಿನ್ ಮಾದರಿಯಲ್ಲಿ ಅಂದೇ ರಾಜ್ಯಪಾಲರ ಹಸ್ತಕ್ಷೇಪಗಳ ವಿರುದ್ದ ಸಂಘರ್ಷಕ್ಕಿಳಿದಿದ್ದರೆ ಇಂದು ಈ ಸ್ಥಿತಿ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಬರುತ್ತಿರಲಿಲ್ಲ.
ಇನ್ನಾದರು ಕಾಂಗ್ರೆಸ್ ಪಕ್ಷ ಫ್ಯಾಸಿಸಂ, ಕೋಮುವಾದದ ವಿರುದ್ದ ಹೋರಾಟದಲ್ಲಿ ಸ್ಪಷ್ಟತೆಯನ್ನು ಗಳಿಸಿಕೊಳ್ಳಲಿ. ಈಗ ನಾಡಿನ ಎಲ್ಲಾ ಪ್ರಜಾಪ್ರಭುತ್ವವಾದಿ ಶಕ್ತಿಗಳು ಐಕ್ಯತೆಯೊಂದಿಗೆ ಕೇಂದ್ರದ ನರೇಂದ್ರ ಮೋದಿ ಸರಕಾರದ ಏಜಂಟ್ ತರ ವರ್ತಿಸುತ್ತಿರುವ, ಮಿತಿ ದಾಟಿ ಸರಕಾರ ಉರುಳಿಸಲು ಯತ್ನಿಸುತ್ತಿರುವ ರಾಜ್ಯಪಾಲರ ವಿರುದ್ದ ಧ್ವನಿ ಎತ್ತಬೇಕಿದೆ.
– ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು




