ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಅವರಿಗೆ ಕೇಂದ್ರ ಸಚಿವ ಸ್ಥಾನಕ್ಕೆ ಒತ್ತಾಯ

2 years ago

ಚಿತ್ರದುರ್ಗದ ಮಾದಿಗ ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಒತ್ತಾಯ

ಬೆಂಗಳೂರು: ಮಾದಿಗ ಸಮುದಾಯದ ಗೋವಿಂದಕಾರಜೋಳ, ರಮೇಶ್ ಜಿಗಜಿಣಿಗಿಯವರು ಸಂಸದರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು ಎಂದು ಚಿತ್ರದುರ್ಗದ ಕೋಡಿಹಳ್ಳಿ, ಅದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾದಿಗ ಸಮುದಾಯಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಮಾದಿಗ ಸಮುದಾಯ ಸಮಾಜದ ಮುಖ್ಯವಾಹಿನಿ ಬರಬೇಕು. ಕೇಂದ್ರದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಅದರಲ್ಲಿ ರಾಜಕೀಯವಾಗಿ ಕುಗ್ಗಿರುವ, ಆರ್ಥಿಕವಾಗಿ ನಿಶಕ್ತರಾಗಿರುವ ಸಮಾಜವನ್ನು ಗುರುತಿಸಲು ಕೇಂದ್ರ ಸರ್ಕಾರ ಎಡವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತಮ ಸರಳ ಸಜ್ಞನ ರಾಜಕಾರಣಿಗಳು ಎಂದು ಗುರುತಿಸಿಕೊಂಡಿರುವ ಗೋವಿಂದಕಾರಜೋಳ, ರಮೇಶ್ ಜಿಗಜಿಣಿಗಿರವರನ್ನು ಕೇಂದ್ರ ಸಚಿವ ಸಂಪುಟ್ಟಕೆ ಆಯ್ಕೆ ಮಾಡಬೇಕಾಗಿತ್ತು. ಆದರೆ ವಿಷಾದನೀಯ ಸಂಗತಿಯೆಂದರೆ, ಎಡಗೈ ಸಮುದಾಯಕ್ಕೆ ಅವಕಾಶ ನೀಡಿಲ್ಲ, ಮತದಾನ ಮಾತ್ರ ಮಾಡಲು ನಮ್ಮನ್ನ ಬಳಸಿಕೊಳ್ಳಬೇಡಿ. ಮಾದಿಗ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ಕೊಡಿ, ಮಾದಿಗ ಸಮುದಾಯವನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದರಿಂದ ಮಾದಿಗ ಸಮುದಾಯ, ಉಪ ಪಂಗಡಗಳಿಗೆ ಬಾರಿ ನೋವುಂಟಾಗಿದೆ ಎಂದರು.

ರಾಜ್ಯದಲ್ಲಿ ದಲಿತ ಸಮುದಾಯದ ಮುಖ್ಯಮಂತ್ರಿಯಾಗಿಲ್ಲ, ರಾಷ್ಟ್ರೀಯ ಪಕ್ಷಗಳು ಪಕ್ಷದ ಅಧ್ಯಕ್ಷ ಸ್ಥಾನಗಳು ನೀಡಿಲ್ಲ. ಗೋವಿಂದ ಕಾರಜೋಳರವರನ್ನು ಕೇಂದ್ರ ಸಚಿವರಾಗಿ ಆಯ್ಕೆ ಮಾಡಬೇಕು. ಇಲ್ಲದೇ ಹೋದರೆ ಮಾದಿಗ ಸಮುದಾಯ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಖಿಲ ಕರ್ನಾಟಕ ದಲಿತ ಸಂಘ ರಾಜ್ಯಾಧ್ಯಕ್ಷ ಬಿ.ಆರ್.ಮುನಿರಾಜು, ಕರ್ನಾಟಕ ಅಹಿಂದ ಹೋರಾಟ ಸಮಿತಿ ಅಧ್ಯಕ್ಷ ಮುತ್ತುರಾಜ್, ಅದಿಜಾಂಬವ ಸಂಘದ ಸಿದ್ದರಾಜು, ದಲಿತ ಮುಖಂಡರಾದ ಉಮೇಶ್ ಭಾಗವಹಿಸಿದ್ದರು.

Leave a Reply