ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣಾರ್ಥ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ ಭಾವಚಿತ್ರಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ ಪುಷ್ಪನಮನ ಸಲ್ಲಿಸಿ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತಾಡಿದ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ರಾಜೀವ್ ಗಾಂಧಿರವರು ದೂರದೃಷ್ಟಿ ಚಿಂತನೆಯ ನಾಯಕ. ಅತಿ ಕಿರಿಯ ವಯಸ್ಸಿನ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು. ರಾಜೀವ್ ಗಾಂಧಿಯರವರ ನನ್ನ ನಡುವೆ ನಿಕಟ ಬಾಂಧ್ಯವವಿತ್ತು. ನನ್ನ ಹೋರಾಟ, ಸಂಘಟನೆಯಲ್ಲಿ ಯಶ್ವಸಿಯಾಗಲು ಅವರು ಸ್ಪೂರ್ತಿಯಾಗಿದ್ದಾರೆ. ಯುವ ಕಾಂಗ್ರೆಸ್ ರಾಜೀವ್ ಗಾಂಧಿರವರ ಪುಣ್ಯಸ್ಮರಣೆ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ಕಿಂಗ್ ಮೇಕರ್ ಆಗುವ ಭ್ರಮೆಯಲ್ಲಿ ಮಾಜಿ ಕುಮಾರಸ್ವಾಮಿರವರು ಇದ್ದಾರೆ. ಅಸೂಯೆ ಇದ್ದವರಿಗೆ ಮದ್ದು ಇಲ್ಲ ಎಂದರು.
ಹೆಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ ಸರಳ, ಸಜ್ಜನ ರಾಜಕಾರಣಿ. 40ನೇ ವಯಸ್ಸಿನಲ್ಲಿ ಪ್ರಧಾನಿಯಾಗಿ ಉತ್ತಮ ಆಡಳಿತ ದೇಶಕ್ಕೆ ನೀಡಿದರು. ರಾಜೀವ್ ಗಾಂಧಿರವರು ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ವಿಜ್ಞಾನ, ತಂತ್ರಜ್ಞಾನ ಕೈಗಾರಿಕೆ ಮತ್ತು ಕೃಷಿಯಲ್ಲಿ ಆಧುನಿಕತೆ ಸ್ಪರ್ಶ ನೀಡಿ ದೇಶದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದರು ಎಂದರು.

ರಾಜೀವ್ ಗಾಂಧಿರವರು ಯುವ ಸಮುದಾಯಕ್ಕೆ ಆಶಾಕಿರಣರಾಗಿದ್ದರು. ಪೆರಂಬದೂರುನಲ್ಲಿ ಬಹಿರಂಗ ಪ್ರಚಾರದಲ್ಲಿ ಉಗ್ರರ ದಾಳಿಯಿಂದ ಹತ್ಯೆಯಾದರು. ದೇಶದ ಏಕತೆ, ಸಮಗ್ರತೆಗೆ ಶ್ರೀಮತಿ ಇಂದಿರಾ ಗಾಂಧಿರವರು ರಾಜೀವ್ ಗಾಂಧಿರವರು ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದರು. ಇಂದು ದೇಶದಲ್ಲಿ ಉಗ್ರವಾದ, ಕೋಮುವಾದ ಆಶಾಂತಿ ತಲೆದೋರಿದೆ. ದೇಶದಲ್ಲಿ ಮತ್ತೊಮ್ಮೆ ಶಾಂತಿ ನೆಲಸಬೇಕು ಎಂದರೆ ಯುವ ಸಮುದಾಯ ಈ ನಿಟ್ಟಿನಲ್ಲಿ ಸಂಘಟಿತರಾಗಬೇಕು. ರಾಜೀವ್ ಗಾಂಧಿರವರ ಆದರ್ಶ, ಮಾರ್ಗದರ್ಶನದಲ್ಲಿ ಶಾಂತಿ, ಸೌಹರ್ದತೆಯ ಮತ್ತು ಬಲಿಷ್ಠ ಭಾರತ ಕಟ್ಟೋಣ ಎಂದರು.

500ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು, ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರಕ್ತದಾನ ಶಿಬಿರಕ್ಕೆ ರೆಡ್ ಕ್ರಾಸ್ ಸಂಸ್ಥೆಯವರು ಸಹಕಾರ ನೀಡಿದರು.




