BSY ಆಪ್ತನ ಬಳಿ 750 ಕೋಟಿ ಅಕ್ರಮ ಆಸ್ತಿ ಪತ್ತೆ

5 years ago

ಬೆಂಗಳೂರು / ದೆಹಲಿ: ಅಕ್ಟೋಬರ್ 7ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಜಿ ಸಿಎಂ ಯಡಿಯೂರಪ್ಪ ಆಪ್ತರ ಮೇಲೆ ನಡೆಸಿದ ದಾಳಿ ವೇಳೆ 750 ಕೋಟಿ ಅಕ್ರಮ ಆಸ್ತಿಪಾಸ್ತಿ ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ದಾಳಿ ಕುರಿತು ಐಟಿ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್ 7ರಂದು ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿನ 47 ಕಡೆಗಳಲ್ಲಿ ದಾಳಿ ನಡೆಸಿದ ವಿಷಯವನ್ನು ಹೇಳಲಾಗಿದೆ. ದಾಳಿ ವೇಳೆ 4.69 ಕೋಟಿ ಹಣ, 8.67 ಕೋಟಿ ಮೊತ್ತದ ಚಿನ್ನ, 29.83 ಲಕ್ಷ ಮೌಲ್ಯದ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.

ಅಕ್ರಮವಾಗಿ 40 ಜನರ ಹೆಸರಿನಲ್ಲಿ ಗುತ್ತಿಗೆ ಪಡೆಯಲಾಗಿತ್ತು. ಅವರ ಹೆಸರಿನಲ್ಲಿ ಉಪ ಗುತ್ತಿಗೆ ಪಡೆಯಲಾಗಿದೆ. ಇದು ಅಕ್ರಮ ಎಂದು ತಿಳಿದು ಬಂದಿದೆ. 750 ಕೋಟಿ ಪೈಕಿ 487 ಕೋಟಿ ಲೆಕ್ಕವಿಲ್ಲದ ಆದಾಯವೆಂದು ಕಂಪನಿಗಳು ಒಪ್ಪಿಕೊಂಡಿವೆ. 380 ಕೋಟಿ ಕಾರ್ಮಿಕರ ವೆಚ್ಚವೆಂದು ತೋರಿರುವುದಾಗಿ ಮಾಹಿತಿ ನೀಡಿದೆ.

Leave a Reply