ಹಸಿರು ನ್ಯಾಯಮಂಡಳಿ ಆದೇಶ ಧಿಕ್ಕರಿಸಿರುವ ವಿರುದ್ಧ ಕ್ರಮಕ್ಕೆ ಮನವಿ

3 years ago

#Petition #action #against #contempt #GreenTribunal #order #bbmp #dkshivakumar

ಬೆಂಗಳೂರು: ಬನಶಂಕರಿ 6ನೇ ಹಂತ, 5ನೇ ವಿಭಾಗದಲ್ಲಿರುವ ಲಿಂಗದೀರನಹಳ್ಳಿ ಘನ ತ್ಯಾಜ್ಯ ಸಂಸ್ಕರಣ ಘಟಕದ ಕಾಂಪೌಂಡ್ ವಾಲ್ ನಿಂದ ಲಿಚೆಟ್ಟನ್ನು(Lichet) ಬಿಟ್ಟಿರುತ್ತಾರೆ ಎಂದು ಬನಶಂಕರಿ ಆರನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಬಿಬಿಎಂಪಿ ಮತ್ತು ಸರ್ಕಾರದ ಮುಂದೆ ಸಮಸ್ಯೆಯನ್ನು ಹೇಳಿಕೊಂಡಿದೆ.

500 ಮೀಟರ್ ದೂರದಲ್ಲಿರುವ ಸೋಂಪುರ ಕೆರೆಗೆ ಕೊಳಚೆ ನೀರು ತಲುಪುತ್ತಿದ್ದು, ಪ್ರಾಣಿ ಪಕ್ಷಿಗಳು ಸತ್ತಿರುತ್ತವೆ ಹಾಗೂ ಅಂತರ್ಜಲ ಕಲುಷಿತಗೊಂಡು ಸುತ್ತಮುತ್ತ ನಿವಾಸಿಗಳು ಕುಡಿಯುವ ನೀರಿಗೆ ಬೋರ್ವೆಲ್ ಅನ್ನೇ ಅವಲಂಬಿಸಿರುತ್ತಾರೆ. ಆ ನೀರನ್ನು ಸೇವಿಸಿ ಅಸ್ವಸ್ಥಗೊಂಡಿರುತ್ತಾರೆ. ಹಸಿರು ನ್ಯಾಯಮಂಡಳಿ (NGT) ಆದೇಶದ ಪ್ರಕಾರ ಹಾಗೂ ನೀವು ಬಿಬಿಎಂಪಿ ಅವರಿಗೆ ಕಾರ್ಯನಿರ್ವಹಿಸಲು ಒಪ್ಪಿಗೆ (Consent Operate) ಪ್ರಕಾರ ಲಿಚಟ್ ಹಾಗೂ ಕೊಳಚೆ ನೀರನ್ನು ಘಟಕದಿಂದ ಹೊರಗಡೆ ಬಿಡಬಾರದೆಂದು ಸೂಚನೆ ನೀಡಿರುತ್ತೀರಾ ಆದರೂ ನಿಮ್ಮ ಆದೇಶಗಳನ್ನು ಧಿಕ್ಕರಿಸಿ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದೆ.

ಘನ ತ್ಯಾಜ್ಯ ಘಟಕದಿಂದ ಹೊರ ಬರುತ್ತಿರುವ ದುರ್ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳು ಉಸಿರಾಡುವುದು ಕಷ್ಟವಾಗುತ್ತಿದ್ದು ಈ ಹಿಂದೆ ತಮಗೆ 250ಕ್ಕೂ ಹೆಚ್ಚು ದೂರುಗಳನ್ನು ನೀಡಿದರು ನೀವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೆ ಸೂಚನೆ ನೀಡಿ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಈ ಮೂಲಕ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

Leave a Reply