ಮಬ್ಬಕ್ತರಿಗೆ ಅರ್ತವೇ ಆಗದಿರುವ ವಿಶಯ ಸೆಕ್ಯುಲರ್ ತತ್ವ‌

3 years ago

#subject #sense #andhabhakts #secular #principle #prakashraj #harshakumarkugwe

ಮಬ್ಬಕ್ತರಿಗೆ ಅರ್ತವೇ ಆಗದಿರುವ ವಿಶಯ ಸೆಕ್ಯುಲರ್ ತತ್ವ‌ ಅಂದರೆ ಏನು ಅನ್ನೋದು.
ಪ್ರಕಾಶ್ ರಾಜ್ ತನ್ನ ಎರಡನೇ ಹೆಂಡತಿ ಜೊತೆ ಕುಕ್ಕೆಗಾದ್ರೂ ಹೋಗಲಿ ಮಗಳ ಜೊತೆಗೆ ಚರ್ಚಿಗಾದರೂ ಹೋಗಲಿ ಅದು ಅವರ ವೈಯಕ್ತಿಕ ನಂಬಿಕೆ. ಅವರ ಯಾವುದೇ ದಾರ್ಮಿಕ ನಂಬಿಕೆ ಹೊಂದುವ ಮತ್ತು ಪಾಲಿಸುವ ಹಕ್ಕು ಸಂವಿದಾನಬದ್ದ. ಅದನ್ನು ಪ್ರಶ್ನಿಸುವ ಹಕ್ಕು ಬಟ್ಟನಿಗೂ ಇಲ್ಲ ಯಾವ್ ಬಕ್ತನಿಗೂ ಇಲ್ಲ.‌

ಅದೇ ರೀತಿ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋಗುವುದು ಸರಿಯಾದ ನಡೆಯಲ್ಲ ಅನ್ನುವುದು ಕೂಡಾ ಸಂವಿದಾನದ ಸೆಕ್ಯುಲರ್ ತತ್ವವೇ ಹೇಳುತ್ತದೆ. ತಿರುಪತಿ ತಿಮ್ಮಪ್ಪನಲ್ಲಿ ನಂಬಿಕೆ ಇರುವ ಯಾರಾದರೂ ಇಸ್ರೋ ವಿಜ್ಞಾನಿಗಳು ತಮ್ಮ ಕುಟುಂಬದ ಜೊತೆ ವೈಯಕ್ತಿಕವಾಗಿ ಹೋಗಿ ಬಂದರೆ ಅದನ್ನು ಯಾರೂ ಕೇಳಬೇಕಿಲ್ಲ. ಆದರೆ ಇಸ್ರೋ ಸಂಸ್ತೆಯನ್ನು ಪ್ರತಿನಿದಿಸಿ ಹೋಗುವುದು ತಪ್ಪು. ಯಾಕೆಂದರೆ ಯಾವುದೇ ಒಂದು ಸರ್ಕಾರೀ ಸಂಸ್ತೆ ಅತವಾ ಸರ್ಕಾರಿ ಅನುದಾನಿತ ಸಂಸ್ತೆ ದಾರ್ಮಿಕ ವಿದಿವಿದಾನಗಳ ವಿಶಯದಲ್ಲಿ ತಟಸ್ತತೆ ಕಾಪಾಡಿಕೊಳ್ಳತಕ್ಕದ್ದು. ಇಸ್ರೋ ಒಂದು ಸರ್ಕಾರಿ ಸಂಸ್ತೆ, ಪೊಲೀಸ್ ಇಲಾಕೆ ಒಂದು ಸರ್ಕಾರಿ ಸಂಸ್ತೆ. ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋಗೋದಾಗಲೀ, ಪೊಲೀಸರು ಆಯುದ ಪೂಜೆ ಆಚರಿಸೋದಾಗಲೀ ಸಂವಿದಾನಕ್ಕೆ ಅಪಚಾರದ ನಡೆಗಳು.‌

ಇನ್ನು ಜನರ ನಡುವೆ ಸರ್ವದರ್ಮ ಸಮನ್ವಯ ಕಾಪಾಡಬೇಕು ಎಂಬುದು ಸಹ ಇದೇ ಸೆಕ್ಯುಲರ್ ತತ್ವದ ಮತ್ತೊಂದು ಮುಕ. ಸಾರ್ವಜನಿಕರಿಗೂ ಇದು ಅನ್ವಯ.

ಅದೇ ರೀತಿ ಒಬ್ಬ ಸರ್ಕಾರಿ ನೌಕರ/ಳು ತನ್ನ ದಾರ್ಮಿಕ ನಂಬಿಕೆಗೆ ಅನುಗುಣವಾಗಿ ಜನಿವಾರ/ಲಿಂಗ/ಕುಂಕುಮ/ಹಿಜಾಬ್/ಸ್ಕಲ್ ಕ್ಯಾಪ್/ ಅಡ್ಡನಾಮ/ಉದ್ದನಾಮ/ಕ್ರಾಸ್‌  ದರಿಸಿ ಬರುವುದನ್ನು ಅವರ ವೈಯಕ್ತಿಕ ದಾರ್ಮಿಕ ಹಕ್ಕಿನ ಅಡಿಯಲ್ಲಿ ಮಾನ್ಯ ಮಾಡಬಹುದು. ಅದರಲ್ಲಿ ಯಾವ ತಪ್ಪಿಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ, ಕಚೇರಿಗಳಲ್ಲಿ ಪ್ರತಿ ಶುಕ್ರವಾರ ಸರಸ್ವತಿ/ ಲಕ್ಷ್ಮಿ ಪೂಜೆ ಮಾಡುವುದು ತಪ್ಪು. ವಿದಾನ ಸೌದದ ಪಕ್ಕದಲ್ಲಿ ಒಂದು ದೇವಸ್ತಾನ ಇರುವುದಾಗಲೀ ಅಲ್ಲಿ ಹೋಗಿ ಇಷ್ಟ ಇದ್ದವರು ಪೂಜೆ ಸಲ್ಲಿಸಿ ಪ್ರಸಾದ ತೆಗೆದುಕೊಂಡು ಬರುವುದಾದಗಲೀ ತಪ್ಪಿಲ್ಲ. ಅದೇ ರೀತಿ ಮುಸ್ಲಿಂ ಶಾಸಕರು ತಮಗೆ ನಮಾಜ್ ಮಾಡಲು ವಿದಾನ ಸೌದದ ಆವರಣದಲ್ಲಿ ಒಂದು ಜಾಗ ಕೇಳಿದರೆ ಅದೂ ತಪ್ಪಲ್ಲ.

ಒಟ್ಟಾರೆ ಸಾರಾಂಶ ಏನೆಂದರೆ ವೈಯಕ್ತಿಕ ನೆಲೆಯ ಯಾವುದೇ ಆಚರಣೆ, ನಂಬಿಕೆಗೆ ಎಲ್ಲರಿಗೂ ಹಕ್ಕಿದೆ. ಒಂದು ಸಂಸ್ತೆಯಾಗಿ, ಒಂದು ಕಚೇರಿಯಾಗಿ ದೇವರು ದರ್ಮದ ವಿಚಾರದಲ್ಲಿ ತಟಸ್ತತೆ ಅತವಾ ನ್ಯೂಟ್ರಾಲಿಟಿ ಕಾಪಾಡಬೇಕು ಎಂದು ಸಂವಿದಾನದ ಸೆಕ್ಯುಲರ್ ತತ್ವ ಹೇಳುತ್ತದೆ.

ಇಶ್ಟು ಸಿಂಪಲ್ ವಿಶಯ ಅರ್ತವಾಕದ ಬಕ್ತಂಗಣಗಳು ತಿಣುಕೋದು ನೋಡಿದ್ರೆ ಪಾಪ ಅನ್ಸತ್ತೆ.

– ಹರ್ಶಕುಮಾರ್ ಕುಗ್ವೆ, ಪತ್ರಕರ್ತರು

(ಈ ಬರಹದಲ್ಲಿ ಉದ್ದೇಶಪೂರ್ವಕವಾಗಿ ಮಹಾಪ್ರಾಣ ಅಕ್ಷರಗಳನ್ನು ಬಳಸಿಲ್ಲ)

Leave a Reply