ಬ್ರಾಹ್ಮಣ ಎಂದರೆ ಬೇರೆಯವರ ಹಿತ ಬಯುಸುವುದು: ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್

3 years ago

ಬ್ರಾಹ್ಮಣ ಎಂದರೆ ಬೇರೆಯವರ ಹಿತ ಬಯುಸುವುದು: ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್

ಬೆಂಗಳೂರು: ಬಸವನಗುಡಿಯ ಎ.ಪಿ.ಎಸ್.ಕಾಲೇಜು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ವತಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಶೀಲರಾದ ವಿಪ್ರ ಶಾಸಕರಿಗೆ ಸನ್ಮಾನ ಸಮಾರಂಭ ನಡೆಯಿತು.

ದಿವ್ಯ ಸಾನಿಧ್ಯದಲ್ಲಿ ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಮಹಾಸ್ವಾಮಿಗಳು, ಅಧ್ಯಕ್ಷ ಆಶೋಕ್ ಹಾರನಹಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಶಾಸಕರುಗಳಾದ  ಆರ್.ವಿ.ದೇಶಪಾಂಡೆ, ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ, ಉದಯ್ ಗರುಡಾಚಾರ್, ಶ್ರೀವತ್ಸ, ವಿಶ್ವಾಸ್ ವೈದ್ಯ ಅವರಿಗೆ ಸನ್ಮಾನಿಸಲಾಯಿತು.

ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿ, ಕರ್ನಾಟಕ ಬ್ರಾಹ್ಮಣ ಮಹಾಸಭಾ ತ್ರಿಮತಸ್ಥ ಬ್ರಾಹ್ಮಣರನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ. ಶಂಕರಚಾರ್ಯ, ರಾಮಾನುಜ, ಮಧ್ವಾಚಾರ್ಯರವರು ಸಿದ್ದಾಂತ ಪ್ರತಿಪಾದನೆಯಲ್ಲಿ ರಾಷ್ಟ್ರ ಚನ್ನಾಗಿರಲಿ, ಮನುಕುಲ ಉದ್ದಾರಕ್ಕೆ ಪ್ರತಿಪಾದಿಸಿದರು.

ಶಂಕಾರಚಾರ್ಯರಿಂದ ವೇದ ಉದ್ದಾರವಾಯಿತು, ಬ್ರಾಹ್ಮಣರು ಸ್ವಾರ್ಥಿಗಳಲ್ಲ, ಪರ ಹಿತಬಯಸುವವರು. ಸಮಾಜದಲ್ಲಿ ಉತ್ತಮ, ಸೌಹರ್ದ ನಿರ್ಮಾಣಕ್ಕೆ ಪ್ರಯತ್ನ ಪಟ್ಟರು. ಅತಿ ಕೆಳ ಸಮುದಾಯದ ವ್ಯಕ್ತಿಗಳನ್ನು ಸರಿಸಮಾನವಾಗಿ ಕಂಡ ಮಹಾನ್ ಸಂತ ರಾಮಾನುಜರು. ಬ್ರಾಹ್ಮಣ ಎಂದರೆ ಬೇರೆಯವರು ಹಿತ ಬಯುಸುವುದು ಎಂದು ಹೇಳಿದರು.

ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮ ಸಮಾಜದ ವಿಚಾರ ಬಂದರೆ ನಾವೆಲ್ಲರು ಒಗ್ಗಟ್ಟಾಗಿ ಸಂಘಟಿತರಾಗಿ ಹೋರಾಟ ಮಾಡಬೇಕು. ಬ್ರಾಹ್ಮಣ ಸಮುದಾಯದಲ್ಲಿ ದೊಡ್ಡ ವ್ಯಕ್ತಿಗಳು ಬಹಳ ಜನ ಇದ್ದಾರೆ, ವಿಪ್ರ ಸಮುದಾಯದ ಅಭಿವೃದ್ದಿಗೆ ಅವರು ಕೈಜೋಡಿಸಬೇಕು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿ. ಅನುದಾನ ತಂದು  ಆದ್ದರಿಂದ ಸಮುದಾಯದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಮ್ಮ ಸರ್ಕಾರ ಐದು ವರ್ಷ ಇರುತ್ತದೆ, ಬ್ರಾಹ್ಮಣ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಸರ್ಕಾರ ಸಹಾಯ, ಸಹಕಾರ ನೀಡಲಿದೆ ಎಂದು ಹೇಳಿದರು.

ಅಶೋಕ್ ಹಾರನಹಳ್ಳಿ ಮಾತನಾಡಿ ರಾಜಕಾರಣದಲ್ಲಿ ಬ್ರಾಹ್ಮಣರು ಬರುವುದು ಕಷ್ಟಕರ. ಆದರು ಇಂತಹ ಪೈಪೋಟಿಯಲ್ಲಿ 11 ಜನ ನಮ್ಮ ಸಮುದಾಯದವರು ಗೆದ್ದಿರುವುದು ಸಂತೋಷಕರ ಸಂಗತಿ. ಬ್ರಾಹ್ಮಣರು ಜಾತಿ ಭೇದಬಾವ ಮಾಡುವುದಿಲ್ಲ, ವಿಶ್ವದಲ್ಲಿ ಇರುವವರು ಎಲ್ಲರು ಒಂದೇ ಎಂದು ಬಾಳುತ್ತಾರೆ. ವಿಪ್ರ ಶಾಸಕರು ಒಳ್ಳೆಯ ಕೆಲಸ ಮಾಡಿ, ನಾವು ಜಾತಿ ರಾಜಕಾರಣ ಮಾಡುವುದಿಲ್ಲ. ನಮ್ಮ ವಿಪ್ರರು ಎಲ್ಲಿ ಇದ್ದರು ಅವರ ಒಳ್ಳೆಯ ಕೆಲಸ ಮಾಡುತ್ತಾರೆ ಆದ್ದರಿಂದ ಗೌರವ  ಸನ್ಮಾನ ಮಾಡಲಾಗುತ್ತಿದೆ ಎಂದು ಹೇಳಿದರು.

Leave a Reply