ಎರಡು ಸರಕಾರಿ ಕೆಎಸ್ಆರ್ಟಿಸಿ ನರ್ಮ್ ಬಸ್ ಪುನರಾರಂಭಿಸುವಂತೆ ಒತ್ತಾಯ

3 years ago

ಮಂಗಳೂರು: ಸ್ಟೇಟ್ ಬ್ಯಾಂಕ್ ನಿಂದ ಬಜಾಲ್, ಜಲ್ಲಿಗುಡ್ಡ, ಫೈಸಲ್ ನಗರ ನಡುವೆ ಸಂಚರಿಸುತ್ತಿದ್ದ ಎರಡು ಸರಕಾರಿ ಕೆಎಸ್ಆರ್ಟಿಸಿ ನರ್ಮ್ ಬಸ್ ಪುನರಾರಂಭಿಸುವಂತೆ ಒತ್ತಾಯಿಸಿ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯಿಂದ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಮಂಗಳೂರು ನಗರದ‌‌ ಸ್ಟೇಟ್ ಬ್ಯಾಂಕ್ ನಿಂದ ಬಜಾಲ್ ಸ್ಟೇಟ್‌ಬ್ಯಾಂಕ್ ವರೆಗೆ ಮತ್ತು ಜಲ್ಲಿಗುಡ್ಡ, ಫೈಸಲ್ ನಗರವರೆಗೆ  ಸಂಚರಿಸುತ್ತಿದ್ದ ಎರಡು ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ಸು ಕಳೆದ ಕೊರೋನಾ ಕಾಲ ಪ್ರಾರಂಭದ ಲಾಕ್ ಡೌನ್ ವೇಳೆ ತನ್ನ ಸೇವೆಯನ್ನು ನಿಲ್ಲಿಸಿದ ನಂತರ ಈವರೆಗೂ ಪುನಃರಾರಂಭ ಗೊಂಡಿರುವುದಿಲ್ಲ. ಇದರಿಂದಾಗಿ ಈ ಭಾಗದ ಜನಸಾಮಾನ್ಯರು ದಿನ ನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಕೂಡಲೇ ಸರಕಾರಿ ನರ್ಮ್ ಬಸ್ಸನ್ನು ಪುನರಾರಂಭಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದೆ.

ಬಹುತೇಕ ಬಡವರೇ ವಾಸಿಸುವ ಬಜಾಲ್ ಸುತ್ತಮುತ್ತಲ ಭಾಗದ‌ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ,ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಾಗೂ ಮತ್ತಿತರ ಕೆಲಸಗಳಿಗೆ ತೆರಳಲು ಬಹುತೇಕ ಸರಕಾರಿ ನರ್ಮ್ ಬಸ್ಸನ್ನೇ ಅವಲಂಭಿಸುತ್ತಿದ್ದಾರೆ. ಈ ಮಧ್ಯೆ ಖಾಸಗೀ ಬಸ್ಸು ಪ್ರಯಾಣ ದರವು ವಿಪರೀತವಾಗಿ ಏರಿಕೆಯಾಗಿದೆ ಮತ್ತದರಲ್ಲಿ ಸಂಚರಿಸದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಪರೀತ ದರ ಏರಿಕೆಯ ಹೊರೆಯಿಂದ ತಪ್ಪಿಸಲು ಸರಕಾರಿ ಬಸ್ಸು ಬಹಳ ಉಪಯುಕ್ತವಾಗುತ್ತಿದ್ದು. ಆದರೆ ಸರಕಾರಿ ಬಸ್ಸು ಕಳೆದ ಒಂದು ವರುಷಗಳಿಂದ ಈ ಭಾಗದ ಸೇವೆಯನ್ನು ನೀಡದೇ ಇರೋದರಿಂದ ಸಮಯಕ್ಕೆ ಸರಿಯಾಗಿ ಅಗತ್ಯ ಸ್ಥಳಗಳಿಗೆ ಸಂಚರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗಕ್ಕೆ ಸರಕಾರಿ ನರ್ಮ್ ಬಸ್ಸು ಬರಬೇಕೆಂದು ಈ ಭಾಗದ ಜನಸಾಮಾನ್ಯರು, ಸಂಘ ಸಂಸ್ಥೆಗಳು , ಪ್ರಗತಿಪರ ಸಂಘಟನೆಗಳ ಹೋರಾಟದ ಭಾಗವಾಗಿಯೇ ಲಭಿಸಲು ಸಾಧ್ಯವಾಗಿದ್ದು ಸರಕಾರಿ ಬಸ್ಸು ಬೇಕೆಂಬುದು ಈ ಊರಿನ ಜನರ ಮೂಲ ಬೇಡಿಕೆಯಲ್ಲೊಂದಾಗಿದೆ. ಸದ್ರಿ ರಾಜ್ಯ ಸರಕಾರ ಮಹಿಳೆಯರಿಗೆ ಕಲ್ಪಿಸಿದ ಉಚಿತ ಪ್ರಯಾಣದಿಂದ ಈ ಭಾಗದ ದುಡಿಯುವ ಮಹಿಳೆಯರು ವಂಚಿತರಾಗುವಂತಾಗಿದೆ. ಆದ್ದರಿಂದ ಈ ಭಾಗದ ಸರಕಾರಿ ನರ್ಮ್ ಬಸ್ಸು ಸೇವೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಮನವಿ ಮಾಡಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಬಜಾಲ್ ಸ್ಟೇಟ್ ಬ್ಯಾಂಕ್ ಹಾಗೂ ಜಲ್ಲಿಗುಡ್ಡ, ಫೈಸಲ್ ನಗರ ದಿಂದ  ಮಂಗಳೂರು ನಗರ ಸ್ಟೇಟ್ ಬ್ಯಾಂಕ್ ವರೆಗೆ ಸಂಚರಿಸುವ ಸರಕಾರಿ ನರ್ಮ್ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಪುನಃರಾರಂಭಿಸಬೇಕೆಂದು ಒತ್ತಾಯಿಸುತ್ತದೆ ಇಲ್ಲದಿದ್ದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ವಿರುದ್ದ ಪ್ರತಿಭಟನೆ ನಡೆಸಲಿದ್ದೇವೆ ಎಚ್ಚರಿಕೆ ನೀಡಿದೆ.

Leave a Reply