ನ್ಯಾ.ಲೋಯಾ ಹತ್ಯೆಯ ಹಿಂದೆ ಇದ್ದುದು ಅಮಿತ್ ಶಾ ಎಂಬುದು ನಿಚ್ಚಳವಾಗಿ ಜಗತ್ತಿಗೆ ಜಾಹೀರಾಯಿತು

3 years ago

ನ್ಯಾಯಮೂರ್ತಿ ಬ್ರಜ್ ಗೋಪಾಲ್ ಲೋಯಾ ಅವರ ಕೊಲೆಯಾಗಿದ್ದು 2014ರ ಡಿಸೆಂಬರ್ 1 ರ ಮುಂಜಾನೆ,
ಈ ಕೊಲೆಯ ಕುರಿತು ಮೊತ್ತಮೊದಲ ತನಿಖಾ ವರದಿ ದ ಕ್ಯಾರಾವಾನ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು 2018ರ ಏಪ್ರಿಲ್ 19 ರಂದು.
ದ ವೀಕ್ ಪತ್ರಿಕೆಯ ತನಿಕಾ ಪತ್ರಕರ್ತರಾಗಿದ್ದ ನಿರಂಜನ್ ಟಕ್ಲೆ ಈ ಪ್ರಕರಣದ ತನಿಕೆ ಕೈಗೊಂಡು 18 ತಿಂಗಳ ಕಾಲ ತಮ್ಮ ಜೀವವನ್ನೇ ಪಣಕ್ಕಿಟ್ಟು ಅಗತ್ಯ ದಾಕಲೆಗಳನ್ನು ಕೂಡಿಹಾಕಿದರು. ಈ ಪ್ರಕ್ರಿಯೆಯಲ್ಲಿ ಇವರ ಮೇಲೆ ಹಲ್ಲೆಗಳಾದವು, ಕೊಲೆ ಯತ್ನವೂ ನಡೆಯಿತು.
ಎಲ್ಲಾ ಎದುರಿಸಿ ವರದಿ ಕೊಟ್ಟಾಗ ದ ವೀಕ್ ಅದನ್ನು ಪ್ರಕಟಿಸಲಿಲ್ಲ. ಕೆಲಸಕ್ಕೆ ರಾಜೀನಾಮೆ ನೀಡಿದರು. ಅಂತಿಮವಾಗಿ ಕ್ಯಾರಾವಾನ್ ಸಂಪಾದಕರು ಇದನ್ನು ಪ್ರಕಟಿಸುವ ಬದ್ದತೆ ತೋರಿದರು… ಆದರೆ ಕೆಲಸ ಕಳೆದುಕೊಂಡ ಟಕ್ಲೆ ನಿರುದ್ಯೋಗಿಯಾಗಿಯೇ ಉಳಿಯಬೇಕಾಯಿತು. ಆದರೆ ಆ ವರದಿಯ ಕಾರಣವಾಗಿ ಸತ್ಯ ಜಗತ್ತಿಗೆ ತಿಳಿಯಿತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ರೂಪದಲ್ಲಿ ಸುಪ್ರೀಂ ಕೋರ್ಟ್ ಮೇಲೇರಿದರೂ ಅಲ್ಲೂ ದೊಡ್ಡ ನಾಟಕರಂಗವೇ ತೆರೆದುಕೊಂಡಿತು. ಇದರ ನಡುವೆಯೇ
ನ್ಯಾ.ಲೋಯಾ ಅವರ ಹತ್ಯೆಯ ಹಿಂದೆ ಇದ್ದುದು ಅಮಿತ್ ಶಾ ಎಂಬುದು… ನಿಚ್ಚಳವಾಗಿ ಜಗತ್ತಿಗೆ ಜಾಹೀರಾಯಿತು.
ತಾವು ಈ ಕೇಸ್ ತನಿಖೆ ಕೈಗೊಳ್ಳಲು ಪ್ರೇರೇಪಿಸಿದ ಕ್ಷಣದಿಂದ ಮೊದಲುಗೊಂಡು 2022ರಲ್ಲಿ ಇಡೀ ಪಯಣವನ್ನು ಪಿನ್ ಟು ಪಿನ್ ಪುಸ್ತಕ ರೂಪದಲ್ಲಿ ದಾಕಲಿಸಲು ಕೂರುವ ವರೆಗೂ ನಿರಂಜನ್ ಟಕ್ಲೆಯವರು Who Killed Judge Loya ಕೃತಿಯಲ್ಲಿ ದಾಕಲಿಸಿದ್ದಾರೆ. ಇದನ್ನು ಅಷ್ಟೇ ಬದ್ದತೆಯಿಂದ Jyothi Ananthasubbarao ಜಜ್ ಲೋಯಾ ಅವರನ್ನು ಕೊಂದವರು ಯಾರು? ಎಂಬ ತಲೆಬರೆಹದಲ್ಲಿ ಕನ್ನಡೀಕರಿಸಿದ್ದಾರೆ. ಇಡೀ ಕೃತಿ ಒಂದು ಸಸ್ಪೆನ್ಸ್ ತ್ರಿಲ್ಲರ್ ಕಾದಂಬರಿಯ ರೀತಿ ಓದಿಸಿಕೊಂಡು ಹೋಗುತ್ತದೆ.
ಆದರೆ,
ಈ ದೇಶ ಬಂದು ತಲುಪಿರುವ ದುಸ್ತಿತಿ
ನ್ಯಾಯಾಂಗವನ್ನೇ ನಂಬಲಾರದ ದುರಂತದ ಸನ್ನಿವೇಶ;
ಪತ್ರಿಕೋದ್ಯಮದ ಹತಾಶ ಸ್ತಿತಿ;
ಸತ್ಯ-ನ್ಯಾಯ ಉಳಿಸಿಕೊಳ್ಳುವ ದೈರ್ಯ ತೋರುವವರು ದಿನನಿತ್ಯ ಎದುರಿಸಬೇಕಾಗುವ ತೊಂದರೆಗಳು, ಆತಂಕಗಳು;
ನ್ಯಾ.ಲೋಯಾ ಅವರ ತಂಗಿ ಡಾ.ಅನುರಾದಾ ಬಿಯಾನಿ ಅವರ ಬಿಕ್ಕಳಿಕೆಗಳು; ಇವರ ಮಗಳು ನೂಪುರ್ ಬಿಯಾನಿಯ ಕೆಚ್ಚು; ನ್ಯಾ.ಲೋಯಾ ಅವರ 85 ವಯಸ್ಸಿನ ತಂದೆಯ ಕಣ್ಣೀರೊಳಗಿನ ಹತಾಶೆ; ಲೋಯಾ ಅವರ ಮಕ್ಕಳು ಈ ಬಾರತದಲ್ಲಿ ಎದುರಿಸಬೇಕಾಗಿ ಬಂದ ಅಬದ್ರತೆ…; ಸೊ ಕಾಲ್ಡ್ ಸೆಕ್ಯುಲರ್ ಪಕ್ಷಗಳಲ್ಲಿನ ರಾಜಕೀಯ ಇಚ್ಚಾಶಕ್ತಿಯ ಕೊರತೆ, ಎಲ್ಲವೂ…ಎಲ್ಲವೂ…
ಬಹಳ ಮುಕ್ಯವಾಗಿ ಈ ದೇಶದ ‘ಬಹುತ್ವ’ವನ್ನು ಉಳಿಸಿಕೊಳ್ಳಲೇಬೇಕು ಎಂಬ ಈ ದಿಟ್ಟ ಪತ್ರಕರ್ತನ ಹಟ…
ಎಲ್ಲವೂ ಪುಟಪುಟದಲ್ಲಿ ಅನಾವರಣಗೊಂಡಿವೆ…

ಈ ಕೃತಿಯ ಕನ್ನಡ ಅನುವಾದಕರು ಒಂದಶ್ಟು ಸಂಸ್ಕೃತ ಪದಗಳನ್ನು ಬಳಸದೇ ಇನ್ನೂ ಕೃತಿಯ ಓದನ್ನು ಸುಲಲಿತಗೊಳಿಸಬಹುದಿತ್ತು ಎನ್ನಲು ಅವಕಾಶವಿದ್ದರೂ ಮೂಲಕೃತಿಯ ಪದಪದಕ್ಕೂ ಸಂಪೂರ್ಣ ನಿಷ್ಟವಾಗಿ ಅನುವಾದ ಇರಬೇಕು ಎಂಬ ಅವರ ಕಾಳಜಿ ಕಾಣುತ್ತದೆ…

ನನ್ನ ಎಲ್ಲಾ ಮಿತ್ರರಿಗೆ ಅದರಲ್ಲೂ ಎಲ್ಲಾ ಪತ್ರಕರ್ತ ಮಿತ್ರರಿಗೆ ಕನ್ನಡದಲ್ಲಿರುವ ಈ ಕೃತಿಯನ್ನು ಕೊಂಡು ಓದಿ ಮತ್ತು ಓದಿಸಿ ಎಂದು ವಿನಂತಿ… ನಾವು ಹೋಗಬೇಕಾದ ದಾರಿಯ ಕಲ್ಲುಮುಳ್ಳುಗಳನ್ನೂ, ದೂರವನ್ನೂ ಈ ಕೃತಿ ನಿಮಗೆ ಮನದಟ್ಟು ಮಾಡಿಸುತ್ತದೆ.

  • ಹರ್ಶಕುಮಾರ್ ಕುಗ್ವೆ, ಪತ್ರಕರ್ತರು

Leave a Reply