ಹಕ್ಕುಪತ್ರ ನೀಡದೇ ಇದ್ದರೆ ಆನೇಕಲ್ ತಹಶಿಲ್ದಾರರ ಕಛೇರಿಗೆ ಬೀಗ!

3 years ago

ಬೆಂಗಳೂರು: ಹಕ್ಕುಪತ್ರ ನೀಡದೇ ಇದ್ದರೆ ಸೋಮವಾರ ಆನೇಕಲ್ ತಹಶಿಲ್ದಾರರ ಕಛೇರಿಯನ್ನು ಬೀಗ ಹಾಕುತ್ತೇನೆ. ಜೈಲಿಗೆ ಹೋಗುತ್ತೇವೆ ಎಂದು ಭಾಗ್ಯಮ್ಮ ಕನ್ನಾಯಕನ ಅಗ್ರಹಾರ ತಿಳಿಸಿದ್ದಾರೆ.

 

ಕಳೆದ 10 ದಿನಗಳಿಂದ ಆನೇಕಲ್ ತಾಲ್ಲೂಕು ಕಛೇರಿಯ ಮುಂದೆ ಹಕ್ಕುಪತ್ರ ನೀಡುವಂತೆ ಹೋರಾಟ ನಡೆಸುತ್ತಿದ್ದಾರೆ. ಇಂದು 10 ನೇ ದಿನ ತಾಲ್ಲೂಕು ಆಡಳಿತ ಮಂಡಳಿಯವರು ಇದುವರೆಗೂ ಯಾವುದೇ ಉತ್ತರ ನೀಡುತ್ತಿಲ್ಲ, ಹೋರಾಟದ ಮೊದಲ ದಿನ ತಹಶಿಲ್ದಾರರ ಬಂದು ಭೇಟಿ ಮಾಡಿ 10 ದಿನ ಸಮಯ ಕೇಳಿದ್ದು ಇವತ್ತು ಹತ್ತು ದಿನ ಕಳೆದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಕರ್ನಾಟಕ ಜನಾಂದೋಲನ ಸಂಘಟನೆಯ ಮರಿಯಪ್ಪ ಮಾತನಾಡಿ, ಈಗಾಗಲೇ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ್ದು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಸೋಮವಾರದ ವರೆಗೂ ಸಮಯ ಕೇಳಿದ್ದು, ಸೋಮವಾರ ಏನಾದರು ಸ್ಪಷ್ಟ ಉತ್ತರ ನೀಡಲಿಲ್ಲ ಎಂದರೆ ಬೀದಿಗೆ ಇಳಿದು ಹೋರಾಟ ಮಾಡುತ್ತೇನೆ. ಸೋಮವಾರ ನೂರಾರು‌ ಜನ ಬರುತ್ತೇವೆ ಎಂದರು.

ಹೋರಾಟದಲ್ಲಿ, ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಕುಮಾರ ಸಮತಳ, BSP ಎಲ್ಲಪ್ಪ, ಭೀಮ್ ಪ್ರಜಾ ಸಂಘದ ಮುರುಗೇಶ್, ಕಲ್ಲಹಳ್ಲಿ ಶ್ರೀನಿವಾಸ್, ರಾಮಯ್ಯ, ಬಶೀರ್, ಆಡಿ ಬಸವರಾಜು, ವೆಂಕಟೇಶ್, ರಾಜಪುರ ಸಂಪಂಗಿ, ಮುನಿ ಇಗ್ಗಳೂರು ಮುನಿಯಪ್ಪ, ಕರೆಯಲ್ಲಪ್ಪ ಮತ್ತು ನೂರಾರು ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದ್ದರು.

Leave a Reply