4ನೇ ಮೈಸೂರ್ – ಆಂಗ್ಲೋ ವಾರ್ 1798-1799 ಟಿಪ್ಪುವಿನ ಮರಣದ ನೈಜ ಕಥನ

3 years ago

4ನೇ ಮೈಸೂರ್- ಆಂಗ್ಲೋ ವಾರ್ 1798-1799
ಟಿಪ್ಪುವಿನ ಮರಣ.( ಸಂಶೋಧನಾತ್ಮಕ ಲೇಖನ.)
.
ಮೊದಲನೆಯ ಮೈಸೂರು ಆಂಗ್ಲೋ ವಾರನ್ನು ಹೈದರ್ ಗೆದ್ದಿದ್ದ ಹಾಗೆಯೇ ಟಿಪ್ಪು ಎರಡನೇ ಯುದ್ಧವನ್ನು ತನ್ನ ನಿಪುಣತೆಯಿಂದ ಗೆದ್ದಿದ್ದ.
ಮೂರನೆಯ ಯುದ್ಧದಲ್ಲಿ ತಾಂಜಾವೂರಿನ ಮೇಲೆ ಯುದ್ಧ ಮಾಡಲು ಟಿಪ್ಪು ಸನ್ನದ್ಧನಾಗಿ ಮಲಬಾರ್
ಪ್ರಾಂತ್ಯವನ್ನು ಒಂದೊಂದೇ ವಸಪಡಿಸಿಕೊಳ್ಳಲು.
ಮಲಬಾರ್ ನಲ್ಲಿದ್ದ , ಅನಿಷ್ಟ ಪದ್ಧತಿಗಳನ್ನು ಅಳಿಸುತ್ತಾ ಬಂದ . ಶೂದ್ರ ಹೆಣ್ಣು ಮಕ್ಕಳು ಎದೆ ಮುಚ್ಚಿಕೊಂಡು ಓಡಾಡುವಂತೆ ಮಾಡಿದ, ಅಲ್ಲಿನ ನಂಬೋದರಿಗಳು ಮತ್ತು ಬ್ರಾಹ್ಮಣ ಸಮುದಾಯ ಏರಿದ್ದ , ಸ್ತನ ಕಂದಾಯ ರದ್ದುಗೊಳಿಸಿದ.
ತನ್ನ ಬಹುತೇಕ ಆಡಳಿತ ಪ್ರದೇಶದಲ್ಲಿ ಉಳುವವನೇ ಒಡೆಯ ಎಂಬ ಪದ್ಧತಿಯನ್ನು. ಹಾಗೆ ಕಂದಾಯ ನೀತಿಯನ್ನು ರಚನೆ ಮಾಡಿದ ,‌ ಮತ್ತು ಅಳವಡಿಸಿದ ಮೊದಲ ಆಡಳಿತಗಾರ..
ಇವೊತ್ತಿಗೆ ಆಗಲೇ ತಾಂಜಾಕೊರ್ ಸಂಸ್ಥಾನವನ್ನು ವಶಪಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಬ್ರಿಟಿಷರು 3ನೇ ಯುದ್ಧದಲ್ಲಿ ಸೋಲಾಗುತ್ತದೆ ತನ್ನ 1/2 ಬಾಗದ ರಾಜ್ಯವನ್ನು ಕಳೆದುಕೊಂಡ ಟಿಪ್ಪು .
ಈಗಿನ ಹಳೆ ಮೈಸೂರು ಪ್ರಾಂತ್ಯವನ್ನು ಉಳಿಸಿಕೊಳ್ಳುತ್ತಾನೆ.
(1798-1799)
ನಾಲ್ಕನೇ ಯುದ್ಧಕ್ಕೆ ಸನ್ನದ್ಧನಾಗಿ ಬಂದಿದ್ದ ವೆಲ್ಲಿಸಲಿ ತನ್ನ ಬಾಂಬೆ ರೆಜಿಮೆಂಟ್ನ ಸೈನ್ಯ ಪಡೆಯ ಜೊತೆಗೆ,
ಮರಾಠ ಪೇಶ್ವಗಳ ಸಹಾಯದಿಂದ ಮರಾಠ ಸೈನ್ಯವನ್ನು , ಹೈದರಾಬಾದಿನ ನಿಜಾಮನ ಸೈನ್ಯವನ್ನು ಒಳಗೊಂಡಂತೆ 60 ಸಾವಿರ ಮಂದಿಯ , ಸೈನ್ಯವನ್ನು ಶ್ರೀರಂಗಪಟ್ಟಣದ ಕಡೆಗೆ ತಿರುಗಿಸಿರುತ್ತಾರೆ.
ಇನ್ನು ಟಿಪ್ಪುವಿನ 35000 ಜನರ ಸೈನ್ಯ ಇವರೊಂದಿಗೆ ಕಾದಾಡಬೇಕು.

ಫ್ರೆಂಚರ ಸಹಾಯವನ್ನು ಪಡೆದಿದ್ದ ಟಿಪ್ಪು.
ಹಾಗೆ ರಾಕೆಟ್ ದಾಳಿಗಳಿಂದ ಬ್ರಿಟಿಷರನ್ನು ಕಂಗೆಡಿಸಿದ್ದ.
ನೇರವಾಗಿ ಟಿಪ್ಪುವನ್ನು ರಣರಂಗದಲ್ಲಿ ಗೆಲ್ಲುವುದು
ಕಷ್ಟ ಸಾಧ್ಯ ಎಂದು ಅರಿತಿದ್ದ ಬ್ರಿಟಿಷರು ತಮ್ಮ ಕುತಂತ್ರ ಕುಟಿಲ ನೀತಿಯನ್ನು ಪ್ರಯೋಗ ಮಾಡುತ್ತಾರೆ. ನಾಲ್ಕು ದಿಕ್ಕಿನಿಂದಲೂ ಶ್ರೀರಂಗಪಟ್ಟಣವನ್ನು ಸುತ್ತುವರಿಯುತ್ತಾರೆ ,
ಮೀರ್ಸಾದಕ್ ನಂತಹ ಕುತಂತ್ರಿಗಳ ಸಹಾಯ ಪಡುವುದರ ಒಟ್ಟಿಗೆ ಟಿಪ್ಪುವಿನ ರಾಕೆಟ್ ಉಗ್ರಾಣ
ಸರಿಯಾಗಿ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳುತ್ತಾರೆ (ಇದೇ ತಂತ್ರವನ್ನು ಕಿತ್ತೂರಿನ ಯುದ್ಧದಲ್ಲೂ ಮಾಡಿರುತ್ತಾರೆ.

ಮೊದಲ ಆಂಗ್ಲೋ ಮೈಸೂರ್ ವಾರ್ , ಮುಂಚಿತವಾಗಿ ಮರಾಠರನ್ನು ಅತಿ ಹೆಚ್ಚು ಕಾಡಿದ್ದ ಹೈದರಾಲಿಖಾನ್ ಮತ್ತು ಮೈಸೂರು ಸಂಸ್ಥಾನದ ಮೇಲೆ ಸದಾ ಕತ್ತಿ ಮಸಿಯುತ್ತಿದ್ದ ಮರಾಠಿ ಪೇಶ್ವೆಗಳ ದ್ವೇಷದ ಉರಿ ಇನ್ನು ಹಾರಿರುವುದಿಲ್ಲ.

ಮೊದಲು ಆಂಗ್ಲೋ ವಾರ್(1767-1769)
ನಂತರದಲ್ಲಿ, ಬ್ರಾಹ್ಮಣ ಪೇಶ್ವೆಗಳ ಎಂಟು ಕುಟುಂಬ
ನಿರ್ಗತಿಕರಂತೆ , ವ್ಯಾಪಾರಸ್ಥರಂತೆ ,ರೈತರಂತೆ, ಕುಸ್ತಿ ಜಟ್ಟಿಗಳಂತೆ ಮೈಸೂರು ಸಂಸ್ಥಾನವನ್ನು ಸೇರಿಕೊಂಡಿರುತ್ತಾರೆ. ಬೆಂಗಳೂರು , ದಾವಣಗೆರೆ ,
ಮಂಡ್ಯದ ಮೇಲುಕೋಟೆ, ಇವತ್ತಿನ ಕೃಷ್ಣಗಿರಿ ತಮಿಳುನಾಡಿನಲ್ಲಿದೆ, ಶ್ರೀರಂಗಪಟ್ಟಣ ಭಾಗಗಳನ್ನು ಸೇರಿಕೊಳ್ಳುತ್ತಾರೆ ಇಲ್ಲಿಯ ಸ್ಥಳೀಯರಂತೆ ಜೀವಿಸುತ್ತಾ , ಈಸ್ಟ್ ಇಂಡಿಯಾ ಕಂಪನಿಗೆ ಮೈಸೂರು ಸಂಸ್ಥಾನದ ಒಂದೊಂದೇ ಮಾಹಿತಿಗಳನ್ನು ರವಾನಿಸುತ್ತಾ ಬದುಕು ನಡೆಸುತ್ತಾರೆ .
ಟಿಪ್ಪು ತನ್ನ ಆಡಳಿತವನ್ನು ಕೈಗೆತ್ತಿಕೊಂಡ ಮೇಲೆ ಇವತ್ತಿನ ಹಳೆ ಮೈಸೂರು ಭಾಗದಲ್ಲಿ ಕಂದಾಯ ನೀತಿಯನ್ನು ಜಾರಿಗೊಳಿಸುತ್ತಾನೆ , ಇದರಿಂದ ಇಲ್ಲಿನ ದೇವಸ್ಥಾನದ ಪುರೋಹಿತ ಶಾಯಿಗಳ ಅದೀನದಲ್ಲಿದ್ದ ಸಾವಿರಾರು ಫಲವತ್ತಾದ ಭೂ ಪ್ರದೇಶಗಳು , ಉಳುಮೆ ಮಾಡುವ ಒಕ್ಕಲಿಗ ಸಮುದಾಯಗಳಿಗೆ ಸಂದಾಯವಾಗಿ ಬಿಡುತ್ತದೆ.

ಇಲ್ಲಿಯವರೆಗೂ ಈ ದೇಶದಲ್ಲಿ ಭೂಮಿ ,ಐಶ್ವರ್ಯ, ಹೆಣ್ಣು ,ಹೊನ್ನು, ಮಣ್ಣುಗಳನ್ನು ,ಅನುಭವಿಸಿಕೊಂಡು ಬಂದಿದ್ದ ಪುರೋಹಿತ ಶಾಯಿ ಮೊದಲ ಬಾರಿಗೆ ಭಾರತ ದೇಶದಲ್ಲಿ ಟಿಪ್ಪುವಿನ ಆಡಳಿತದಲ್ಲಿ ಭೂಮಿಯನ್ನು ಕಳೆದುಕೊಳ್ಳುತ್ತದೆ .
ದೇವಸ್ಥಾನಗಳ ಮುಖಾಂತರ ಕಂದಾಯಗಳನ್ನು ದೇವರ ಹೆಸರಿನಲ್ಲಿ ಪಡೆಯುತ್ತಿದ್ದ ಪದ್ಧತಿಗೂ ಪೆಟ್ಟು ಬೀಳುತ್ತದೆ ನೇರವಾಗಿ ಮೈಸೂರು ಸರ್ಕಾರಕ್ಕೆ ಜನ ಕಂದಾಯ ಕಟ್ಟುವ ನೀತಿಯನ್ನು ಟಿಪ್ಪು ಮಾಡಿಕೊಡುತ್ತಾನೆ, ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಾನೆ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಾನೆ ರೇಷ್ಮೆ ಬೆಳೆ , ಚನ್ನಪಟ್ಟಣದ ಬೊಂಬೆ, ಬೆಲ್ಲ ಉತ್ಪಾದನೆ, ಕನ್ನಡದಲ್ಲಿ ಟಂಕಶಾಲೆ, ಹಳಿಕಾರ್ ಹಸುವಿನ ಅಭಿವೃದ್ಧಿ ಮತ್ತು ಗೋಮಾಳಗಳನ್ನು ಸೃಷ್ಟಿಸಿ ಪಶು ಸಂಗೋಪನೆಗೆ ಹಳೆ ಮೈಸೂರು ಭಾಗದಲ್ಲಿ ಅನುವು ಮಾಡಿಕೊಡುತ್ತಾನೆ.
ಇದರಿಂದ ದೊಡ್ಡ ನಷ್ಟ ಅನುಭವಿಸಿದ್ದು ಮೇಲುಕೋಟೆಯ ಪುರೋಹಿತಶಾಹಿ .

ಹೊಯ್ಸಳರ ಬಿಟ್ಟಿದೇವ, ವಿಷ್ಣುವರ್ಧನನಾಗಿ ಮತಾಂತನಾದ ನಂತರದಲ್ಲಿ ಅಪಾರ ಸಂಪತ್ತಿನೋಡನೆ ಮೇಲುಕೋಟೆಗೆ ಬಂದಿದ್ದ ರಾಮಾನುಜಾಚಾರ್ಯರ ವಂಶಸ್ಥರಿಗೆ ವಿಷ್ಣುವರ್ಧನ ಈ ಭಾಗದ ಫಲವತ್ತಾದ ಭೂಮಿಗಳನ್ನು ಸಾವಿರಾರು ಎಕರೆ ಎಷ್ಟು ಭೂಮಿಗಳನ್ನು ಬಳುವಳಿಗಾಗಿ ಉಂಬಳಿಕೆಯಾಗಿ ಕೊಟ್ಟಿರುತ್ತಾನೆ ಟಿಪ್ಪುವಿನ ಕಾಲದಲ್ಲಿ ಈ ಫಲವತ್ತಾದ ಭೂಮಿಗಳನ್ನು ಕಳೆದುಕೊಂಡ ಮೇಲುಕೋಟೆಯ ಪುರೋಹಿತಶಾಹಿಗಳಿಗೆ ದಿಕ್ಕು ತೋಚದಂತೆ ಆಗುತ್ತದೆ.

ಮೇಲುಕೋಟೆ ಆಸುಪಾಸಿನಲ್ಲಿ ಬೀಳು ಬಿಟ್ಟಿದ್ದ ಪೇಶ್ವೆ ಇದೇ ಸಮಯದಲ್ಲಿ ಮೇಲುಕೋಟೆಯ ಪುರೋಹಿತಶಾಹಿಯನ್ನು ಟಿಪ್ಪುವಿನ ವಿರುದ್ಧವಾಗಿ ಎತ್ತಿ ಕಟ್ಟುತ್ತದೆ. ಮತ್ತು ಒಳಸಂಚುಗಳನ್ನು ರೂಪಿಸಲು ಪ್ರಾರಂಭಿಸುತ್ತಾರೆ. ನಾಲ್ಕನೇ ಆಂಗ್ಲೋ ಯುದ್ಧ ಬರುವ ಹೊತ್ತಿಗೆ , ಪೇಶ್ವೆಗಳು ಉಪಾಯದಿಂದ ಟಿಪ್ಪುವಿನ ಸೈನ್ಯದ ಒಳಗೆ ಸೇರಿಕೊಂಡಿರುತ್ತಾರೆ ಮಿರ್ಸಾಧಕ್ನ ಸಹಾಯ ಪಡೆದ ಬ್ರಿಟಿಷರು ಪೇಶ್ವೆಗಳ ಸಹಾಯವನ್ನು ಪಡೆದುಕೊಂಡು ಸೈನ್ಯವನ್ನು , ಒಳಗಿನಿಂದ ದುರ್ಬಲಗೊಳಿಸುತ್ತಾರೆ.
ಪೇಶ್ವೆಗಳೆರಡು ಕುಟುಂಬ , ನಾರಾಯಣ ನಂಜರಾವ್ ಮತ್ತು ವಿಶ್ವನಾಥ ಹರಿ(ಉರಿ) ಭಟ್ ಕುಟುಂಬಗಳ ಪಾತ್ರ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಟಿಪ್ಪುವನ್ನು ಕೊಲ್ಲಲು , ಮತ್ತು ಮೀರ್ಸಾದಕ ಜೊತೆ ಸೇರಿ ಆಂಗ್ಲೋ ನಾಲ್ಕನೇ ಆಂಗ್ಲೋ ಯುದ್ಧದಲ್ಲಿ ಟಿಪ್ಪು ಸೋಲು ಕಾಣಲು ಕಾರಣರಾಗುತ್ತಾರೆ.
ಬ್ರಿಟಿಷ್ ದಾಖಲಾತಿ ಪ್ರಕಾರ ಬ್ರಿಟನ್ ಯೋಧನೊಬ್ಬನ ಗುಂಡಿನಿಂದ ಟಿಪ್ಪು ಹತನಾಗಿರುತ್ತಾನೆ ಇಂದು ದಾಖಲಾಗಿದೆ.

ಆದರೆ ಟಿಪ್ಪುವಿನ ಸಾವನ್ನು ಹೊಂಚು ಹಾಕಿ ಕೂತಿದ್ದ ನಂಜರಾವ್ ಮತ್ತು ಹರಿ ಭಟ್ ಎಂಬ ಪೇಶ್ವೆ ಕುಟುಂಬದ ಕಥೆಗಳು ಇತಿಹಾಸದಲ್ಲಿ ಗೌಪ್ಯವಾಗಿ ಅಡಗಿ ಕೂತಿವೆ ಇದನ್ನು ಹೆಚ್ಚು ಬಲ್ಲವರು ಮೇಲ್ಕೋಟೆಯ ಪುರೋಹಿತಶಾಹಿ ಈಗಲೂ
ಮೇಲುಕೋಟೆಯಲ್ಲಿ ಮನೆಗಳಲ್ಲಿ ಹರಿ ಭಟ್ ಮತ್ತು ನಂಜರಾವ್ ರವರಿಗೆ ಪೂಜೆಗಳನ್ನು ಸಲ್ಲಿಸುತ್ತಾರೆ.

ಟಿಪ್ಪು ಸಾವಿನ ನಂತರ ಬ್ರಿಟಿಷ್ ಆಡಳಿತದಲ್ಲಿ ಮತ್ತೆ ಮತ್ತು ಶ್ರೀರಂಗಪಟ್ಟಣದ ಕೆಲವು ಪುರೋಹಿತಶಾಹಿ ವರ್ಗ ಭೂಮಿಯನ್ನು ಮತ್ತು ಸಂಪತ್ತನ್ನು ತಮ್ಮದಾಗಿಸಿಕೊಂಡಿತು.

– ಅಭಿರತ್ನ ನಾಗವಾರ

One Response

Leave a Reply