
ರಾಜಕೀಯ
ಅಕ್ರಮ ದೀಪಾಲಂಕಾರಕ್ಕೆ ದಂಡ ಪಾವತಿಸಿದ ಎಚ್.ಡಿ.ಕುಮಾರಸ್ವಾಮಿ: ಸರ್ಕಾರದ ವಿರುದ್ಧ ಕಿಡಿ
ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ತಮ್ಮ ಮನೆಯ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದದ್ದಕ್ಕೆ ಬೆಸ್ಕಾಂ ವಿಧಿಸಿದ್ದ 68,526 ರೂಪಾಯಿ ದಂಡವನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ಪಾವತಿ ಮಾಡಿದ್ದಾರೆ.