ಬಿಜೆಪಿಗೆ 18 ಪ್ರಶ್ನೆಗಳನ್ನು ಕೇಳಿದ ಡಾ.ಎಚ್.ಸಿ.ಮಹದೇವಪ್ಪ

4 years ago

ದೊಡ್ಡ ಬಳ್ಳಾಪುರದಲ್ಲಿ ನಡೆದ “ಜನಸ್ಪಂದನ ಎಂಬ ತಮಾಷೆಯ ಹೆಸರಿನ” ಸಮಾವೇಶದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅಪ್ರಬುದ್ಧವಾಗಿ ಕಿರುಚಾಡಿದ್ದು ಬಿಜೆಪಿಯ ಸಾಧನೆಯನ್ನು ನಾವು ಮನೆ ಬಾಗಿಲಿಗೆ ತಲುಪಿಸಿ 150 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಬೊಮ್ಮಾಯಿಯವರೇ ನಿಮ್ಮ ಸರ್ಕಾರದ ಯಾವ ಸಾಧನೆಯ ಬಗ್ಗೆ ಜನರ ಬಳಿ ಮಾತನಾಡುತ್ತೀರಿ?

1) ನಿಮ್ಮ 40% ಕಮಿಷನ್ ಭ್ರಷ್ಟಾಚಾರದ ಬಗ್ಗೆಯೋ?

2) ನೀವು ಪಠ್ಯ ಪುಸ್ತಕ ತಿರುಚಿದ ಬಗ್ಗೆಯೋ?

3) ಕಿಟಕಿ ಒಳಗಿಂದ ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೇಲೆ ಹೇಗೆ ಹಾರಿಕೊಂಡು ಬಂದರೆಂದೋ?

4) ಪೆಟ್ರೋಲ್ ಬೆಲೆಯನ್ನು 100 ರೂಪಾಯಿ ಗಡಿ ದಾಟಿಸಿದ ಬಗ್ಗೆಯೋ?

5) ಅಡುಗೆ ಸಿಲಿಂಡರ್ ಬೆಲೆ 1000 ರೂಪಾಯಿ ದಾಟಿಸಿದ ಬಗ್ಗೆಯೋ ?

6) ಸಮಾಜದಲ್ಲಿ ಧರ್ಮದ ಹೆಸರಲ್ಲಿ ಅಶಾಂತಿ ಮೂಡಿಸುವ ಬಗ್ಗೆ ಹೇಳುವಿರೋ?

7) ಪೊಲೀಸ್ , ಲೆಕ್ಚರರ್ ಹಾಗೂ ಇನ್ನಿತರೆ ಹುದ್ದೆಗಳಲ್ಲಿ ನಿಮ್ಮ ಸರ್ಕಾರ ನೇಮಕಾತಿ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆಯೋ ?

8) ಅಕ್ಕಿ ಬೇಳೆ ಅಡುಗೆ ಎಣ್ಣೆ ಬೆಲೆ ವಿಪರೀತ ಏರಿಸಿದ್ದೀರಲ್ಲಾ ಆ ಬಗ್ಗೆಯೋ ?

9) ನಮ್ಮ ಯೋಗ್ಯತೆಗೆ ಇಷ್ಟು ದಿನವಾದರೂ ನಮಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ನೀಡುವಿರೋ?

10) ಬಡವರ ಭೂಮಿಯನ್ನು ಬೇಕಾ ಬಿಟ್ಟಿಯಾಗಿ ಆರ್ ಎಸ್ ಎಸ್ ಗೆ ನೀಡುತ್ತಿದ್ದೀರಲ್ಲಾ ಆ ಬಗ್ಗೆ ಮಾತನಾಡುತ್ತೀರೋ ?

11) ಎಸ್ ಸಿಪಿ/ಟಿಎಸ್ ಪಿ ಹಣವನ್ನು ಒದಗಿಸದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮೋಸ ಮಾಡಿದ ಬಗ್ಗೆ ಚರ್ಚಿಸುತ್ತೀರೋ?

12) ಗುತ್ತಿಗೆ ಮೀಸಲಾತಿ ಕಾಯ್ದೆಯಡಿ ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಗೆ ನೀಡಬೇಕಿದ್ದ 50 ಲಕ್ಷ ಗುತ್ತಿಗೆಯನ್ನು ನಿಲ್ಲಿಸಿದ್ದೇವೆ ಎಂದು ಜನರ ಬಳಿ ಹೇಳುತ್ತೀರೋ?

13) ಪಿಟಿಸಿಎಲ್ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭೂಮಿಯನ್ನೇ ನೀಡದೇ ಎಲ್ಲವನ್ನೂ ಆರ್ ಎಸ್ ಎಸ್ ಗೆ ನೀಡುತ್ತೀವಿ ಎನ್ನುತ್ತೀರೋ?

14) ಅತಿವೃಷ್ಟಿಯಿಂದ ಬೆಂಗಳೂರು ಮುಳುಗಿದರೂ ಯಾವುದೋ ಸಮಾವೇಶದಲ್ಲಿ ನಾವೆಲ್ಲಾ ಡ್ಯಾನ್ಸ್ ಮಾಡ್ತಾ ಇದ್ವಿ ಅಂತ ಹೇಳುವಿರೋ?

15) ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡದೇ ಅಹಂಕಾರ ಪ್ರದರ್ಶನ ಮಾಡ್ತಾ ಇದ್ದೀವಿ ಅಂತ ಹೇಳುವಿರೋ?

16) ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೆಐಡಿಬಿ ವತಿಯಿಂದ ನೀಡಲಾಗುತ್ತಿದ್ದ 2 ಕರೆ ಭೂಮಿಯನ್ನು ಅರ್ಧ ಎಕರೆಗೆ ಏಕೆ ಇಳಿಸಿದ್ದೀರಿ ಎಂದು ಹೇಳುತ್ತೀರಾ?

17) ಈಗ ನೀವೇ ಹೇಳುವಂತೆ ನಾವು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯವನ್ನು ರದ್ದು ಮಾಡುತ್ತೇವೆ ಎಂದು ಹೇಳುತ್ತೀರಾ ?

18) ಇನ್ನು ಈಗಾಗಲೇ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೂ ಉಚಿತ ಇದ್ದ ಶಿಕ್ಷಣಕ್ಕೆ ಕಲ್ಲು ಹಾಕಿ ಅವರಿಂದಲೂ ಶುಲ್ಕ ಸಂಗ್ರಹಿಸುತ್ತಿದ್ದೇವೆ ಎಂದು ಹೇಳುತ್ತೀರಾ?

ದಯಮಾಡಿ ಈ ಮೇಲೆ ತಿಳಿಸಿದ ಯಾವ ಸಾಧನೆ ಬಗ್ಗೆ ಮಾಡುತ್ತೀರಾ ಎಂಬುದನ್ನು ಜನರಿಗೆ ತಿಳಿಸಿ!

– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

Leave a Reply