ಜೂನ್ 18 ರಿಂದ 24 ವರೆಗೆ ಸಸ್ಯ ಸಂತೆ

2 years ago

ಧಾರವಾಡ: ಧಾರವಾಡ ತಾಲೂಕಿನ ಕುಂಬಾಪೂರ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಜೂನ್ 18 ರಿಂದ ಜೂನ್ 24, 2024 ರವರೆಗೆ ಸಸ್ಯ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ.

ಸಸ್ಯ ಸಂತೆಯಲ್ಲಿ ಉತ್ತಮ ಗುಣಮಟ್ಟದ ಕಸಿ ಮಾಡಿದ ವಿವಿಧ ತಳಿಯ ಹಣ್ಣಿನ ಸಸಿಗಳಾದ ಮಾವು, ಲಿಂಬೆ, ಹುಣಸೆ, ಕವಳೆ, ಚಿಕ್ಕು, ಪೇರಲ, ನೇರಳೆ ಇತ್ಯಾದಿ ಸಸಿಗಳು ಯೋಗ್ಯ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply