ಬಾಗಲಕೋಟೆ: ಆಗಸ್ಟ್ 22ರಂದು ರಾಜ್ಯಾದಾದ್ಯಂತ ಶಿವ ಶರಣ ನೂಲಿ ಚಂದಯ್ಯನವರ ಜಯಂತಿ ಆಚರಿಸುವಂತೆ ಕರೆ ನೀಡಲಾಗಿದೆ.
ಸಾವಳಗಿಯಲ್ಲಿ ಈ ಕುರಿತುಪ್ರತಿಕ್ರಿಯಿಸಿದ ರಮೇಶ್ ಭಜಂತ್ರಿ, ಕೊರಮ, ಕೊರಚ, ಕುಳುಚ ಸಮಾಜದ ಕುಲದೈವ ಕಾಯಕ ಜಂಗಮರಾದ ಶ್ರೀ ನೂಲಿ ಚಂದಯ್ಯನವರ 914ನೇ ಜಯಂತಿಯನ್ನು ಇದೇ ತಿಂಗಳು 22ರಂದು ಆಚರಿಸಬೇಕೆಂದು ತಮ್ಮ ಕುಲ ಭಾಂದವರಿಗೆ ಕರೆ ನೀಡಿದ್ದಾರೆ.
22 ರಂದು ರಾಜ್ಯ ಮಟ್ಟದಲ್ಲಿ ಏಕಕಾಲದಲ್ಲಿ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ಆಚರಿಸಬೇಕೆಂದು ರಾಜ್ಯ ಮಟ್ಟದಲ್ಲಿ ನಿರ್ಣಯ ತೆಗೆದುಕೊಂಡ ಕಾರಣ ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಮತ್ತು ಮನೆಮನೆಗಳಲ್ಲಿ ಜಯಂತಿಯನ್ನ ತಪ್ಪದೇ ಆಚರಿಸಬೇಕು. ಅದರೊಂದಿಗೆ ಊರಿನ ಗಣ್ಯರನ್ನು, ಜನಪ್ರತಿನಿಧಿಗಳನ್ನು ಮತ್ತು ಪತ್ರಕರ್ತರನ್ನು ಆಮಂತ್ರಿಸಿ ಭಕ್ತಿ ಪೂರ್ವಕ ಜಯಂತಿಯನ್ನು ಆಚರಿಸಬೇಕು ಎಂದು ಅವರು ಹೇಳಿದರು.
ಸಾಧ್ಯವಾದಲ್ಲಿ ಪ್ರತ್ಯೇಕವಾಗಿ ಕುಲವ(ಕೊರಮ) ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಪಿ.ಕೆ.ಪಿ.ಎಸ್. ಬ್ಯಾಂಕ್ ಸದಸ್ಯ ವಿಠ್ಠಲ ಗೊ.ಭಜಂತ್ರಿ, ಹಣಮಂತ ಭಜಂತ್ರಿ, ಮಹಾಂತೇಶ ಭಜಂತ್ರಿ, ಶ್ಯಾಮ ಭಜಂತ್ರಿ, ಪೋಂಡಪ್ಪ ಭಜಂತ್ರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.




