ಗ್ರಾಮಒನ್ ಪ್ರಾಂಚೈಸಿಗಳಿಗೆ ಅರ್ಜಿ ಆಹ್ವಾನ

2 years ago

ಧಾರವಾಡ: ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೂ. ಅರಳಿಕಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 02 ಗ್ರಾಮ್ ಒನ್ ಕೇಂದ್ರಗಳಿ ಗೆ ಪ್ರಾಂಚೈಸಿಗಳನ್ನು ಆಯ್ಕೆ ಮಾಡಲು ಆನ್ಲೈರನ್ ಮೂಲಕ (https://www.karnatakaone.gov.in/Public/GramOneFranchiseeTerms) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪಿ.ಯು.ಸಿ., ಐ.ಟಿ.ಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಯೊಂದಿಗೆ ಕಂಪ್ಯೂಟರ್ ಜ್ಞಾನವುಳ್ಳ ಆಸಕ್ತರು, ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಠ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟದೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಟ್ಯಾನ್ಸರ್, ಬಯೋಮೆಟ್ರಿಕ್ ಡಿವೈಸ್, ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆಯೊಂದಿಗೆ ಇಲಾಖೆ ಕಾಲಕಾಲಕ್ಕೆ ಸೂಚಿಸುವ ಮಾನದಂಡಗಳಿಗೆ ಬದ್ಧರಾಗಿರುವವರು ಅರ್ಜಿಯನ್ನು ಡಿಸೆಂಬರ್ 15 ರೊಳಗೆ ಸಲ್ಲಿಸಬಹುದಾಗಿದೆ.

ಮಾನದಂಡಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಮೊಬೈಲ್ ಸಂಖ್ಯೆ 9019026687, 9019026697, 9019026690, 9019027696 ಗೆ ಸಂಪರ್ಕಿಸಬಹುದು.

Leave a Reply