ಮಿಶ್ರತಳಿ ಹಸು ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2 years ago

#Application #Invitation #Subsidy #Purchase #Crossbred #Cow

ಬೆಂಗಳೂರು: ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ 2023-24ನೇ ಸಾಲಿನ ಹಾಲು ಉತ್ಪಾದಕರನ್ನು ಉತ್ತೇಜಿಸಲು ವಿಶೇಷ ಘಟಕ ಯೋಜನೆ / ಗಿರಿಜನ ಉಪಯೋಜನೆ ಕಾರ್ಯಕ್ರಮದಡಿ ಮಿಶ್ರತಳಿ ಹಸು/ಎಮ್ಮೆ ಖರೀದಿಸಲು ಸಹಾಯಧನಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿಗಳನ್ನು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಆನೇಕಲ್ ತಾಲ್ಲೂಕು, ಪಶು ಆಸ್ಪತ್ರೆ ಆವರಣ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಪಡೆದು ಸೂಕ್ತ ದಾಖಲೆಗಳೊಂದಿಗೆ ನವೆಂಬರ್ 30 ರೊಳಗೆ ಸಲ್ಲಸಬಹುದು.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿ, ಪಶು ವೈದ್ಯ ಆಸ್ಪತ್ರೆ, ಆನೇಕಲ್ ತಾಲ್ಲೂಕು ಅಥವಾ ದೂರವಾಣಿ: 080-27841808 ಮೂಲಕ ಸಂಪರ್ಕಿಸಬಹುದು.

Leave a Reply