ದೇಶ ಮತ್ತೆ ಪುಷ್ಯಮಿತ್ರಶುಂಗನ ಕಾಲಕ್ಕೆ ಹೋಗಬಾರದು

2 years ago

ಇತ್ತೀಚೆಗೆ ರಾಜಸಭಾ ಸದಸ್ಯ ಸ್ಥಾನದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರ ಘೋಷಣೆ ಕೂಗುವ ಸಂದರ್ಭದಲ್ಲಿ ಗೋದಿ ಮೀಡಿಯಾಗಳು ತನ್ನ ಅನ್ನದ ಋಣ ತೀರಿಸಲು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ತಿರುಚಿದ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಅಪಪ್ರಚಾರ ಮಾಡುವುದನ್ನು ಯಾವ ಮೂಲಕ ಖಂಡಿಸಬೇಕು?

ಇಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರು ಎನ್ನುವ ಮಾತೆ ಇಲ್ಲ. ಯಾರೇ ತಪ್ಪು ಮಾಡಿದರು ವಿರೋಧಿಸುವುದು ನಾಗರಿಕರ ಕರ್ತವ್ಯ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮನುವ್ಯಾದಿ ಮಾಧ್ಯಮಗಳು ತಿರುಚಿ ಅಪಪ್ರಚಾರ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿವೆ.

ಇಂತಹ ಸಮಯದಲ್ಲಿ ಈ ದೇಶದ ಪ್ರಸ್ತುತ ಸನ್ನಿವೇಶವನ್ನು ಅರ್ಥ ಮಾಡಿಕೊಂಡಿರುವ ಪ್ರಜ್ಞಾವಂತರು / ನಾಗರೀಕರು ಸುಮ್ಮನೆ ಇದ್ದರೆ ದೇಶವನ್ನು ಅದೋಗತಿಗೆ ತರುವ ಪ್ರಯತ್ನ ಮಾಡಿ ಮನುವಾದಿಗಳು ಕಾರ್ಯ ಸಾಧನೆ ಮಾಡಿಕೊಳ್ಳುವ ಎಲ್ಲಾ ಯತ್ನಗಳು ನಡೆಯುತ್ತಿವೆ.

ಈ ದೇಶ ಜಾತ್ಯಾತೀತ ನಿಲುವು ಹಾಗೂ ಡಾ.ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನವನ್ನು ಉಳಿಸಿಕೊಳ್ಳಬೇಕೆಂದು ಪ್ರಯತ್ನ ಮಾಡುವಾಗ ದುಷ್ಟ ಶಕ್ತಿಗಳು ತಡೆಯುವ ಎಲ್ಲಾ ಪ್ರಯತ್ನ ಮಾಡುತ್ತವೆ. ಆದರೆ ಈ ದೇಶವನ್ನು ಮನುವಾದಿಗಳ ಕೈಗೆ ನೀಡಿ ಮತ್ತೆ ಪುಷ್ಯಮಿತ್ರಶುಂಗನ ಕಾಲಕ್ಕೆ ಹೋಗಬಾರದು ಎಂಬ ನಿಲುವು ಹೊಂದಿರುವವರು ಸಾಧ್ಯವಾದಷ್ಟು ಈಗಿನ ಸಂವಿಧಾನವನ್ನು ಉಳಿಸಿಕೊಳ್ಳೊಣ.

ಆದರೆ ಯುವ ಜನಾಂಗವನ್ನು ದೇಶಪ್ರೇಮದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಹುನ್ನಾರವನ್ನು ಮನುವಾದಿಗಳು ಮಾಡುವುದನ್ನು ಪ್ರಜ್ಞಾವಂತರು ತಡೆಯುವ ಕೆಲಸ ಮಾಡದೇ ಇದ್ದಲ್ಲಿ ಅಪಾಯವನ್ನು ನಾವೇ ತಂದುಕೊಳ್ಳುವಂತೆ ಆಗುತ್ತದೆ ಎಂಬುದನ್ನು ಮರೆಯಬಾರದು.

– N.S. ಈಶ್ವರಪ್ರಸಾದ್, ನೇರಳೇಕೆರೆ. ಮಧುಗಿರಿ ತಾಲೂಕು

Leave a Reply