ಇತ್ತೀಚಿಗೆ ಕೆಲವು ವಿಡಿಯೋಗಳಲ್ಲಿ ಪರಿಶಿಷ್ಟ ಜಾತಯವರು ಬೌದ್ಧ ಧರ್ಮ ಸ್ವಿಕಾರ ಮಾಡುವ ಸಂಧರ್ಭದಲ್ಲಿ ಹಿಂದೂ ಧರ್ಮ ಆಚರಣೆಯನ್ನು ನಿರಾಕರಣೆ ಮಾಡುವ ದೃಶ್ಯಗಳುನ್ನು ಕಂಡು ಹಿಂದುತ್ವವಾದಿಗಳು ಕೆಲವು ಪದಗಳಿಂದ ವಿರೋಧಿಸುವುದನ್ನು ನೋಡಿದ್ದೇನೆ. ಆದರೆ ಇವರಿಗೆ ಅತ್ಮಗೌರವ ಬಗ್ಗೆ ಗೊತ್ತಿಲ್ಲ ಎನ್ನಿಸುತ್ತದೆ. ಇವರಿಗೆ ಮನುವಾದಿಗಳು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮಾಡಿ ಇವರ ಜನಾಂಗದವರಿಗೆ ಕೀಳರಿಮೆಯಿಂದ ಅನುಭವಿಸುವವರು ಇದ್ದಾರೆ. ಜಾತಿ ನಿಂದನೆಯನ್ನು ಅನುಭವಿಸುವವರು ಇದ್ದಾರೆ. ಇದರ ಸಂಕಟ ಗೊತ್ತಿಲ್ಲದೆ ಇರಬಹುದು ಅಂಧ ಭಕ್ತರಿಗೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇವರು ಧರ್ಮಕಾಗಿ ತ್ಯಾಗ ಮಾಡಿರಬಹುದು. ಆದರೆ ಎಲ್ಲರೂ ಆಗಿಲ್ಲ ಅಲ್ಲವೆ? ಜಾತಿ ನಿಂದನೆಗಳ ಬಗೆ ಹಲವಾರು ಸಮುದಾಯಗಳು ಹೋರಾಟ ಮಾಡಿದ್ದು ಇದೆ. ಅದು ಅತ್ಮಗೌರವಕ್ಕಾಗಿ, ಆದರೆ ಅಸ್ಪಶ್ಯತೆಯನ್ನು ಅನುಭವಿಸುತ್ತಿರುವ ಕೆಲವು ಸಮುದಾಯಗಳು ತಮ್ಮ ಸ್ವಾಭಿಮಾನ ಕಾರಣದಿಂದ ಮೂಲಧರ್ಮಕ್ಕೆ (ಬೌದ್ಧ ) ಹೋಗುತ್ತಿರುವ ಸಂದರ್ಭದಲ್ಲಿ ಕೆಲವು ವಿಚಾರದಲ್ಲಿ ಪ್ರಮಾಣ ಮಾಡುವ ದೃಶ್ಯಗಳು ಕಾಣಬಹುದು.
ಇಂತಹ ಸಂದರ್ಭದಲ್ಲಿ ಹಿ೦ದೂತ್ವವಾದಿಗಳು ವ್ಯಂಗ್ಯ ಮಾಡುವ ಬದಲು ಹಿಂದೂಪರ ಸಂಘಟನೆಗಳು ದಲಿತರು ಅನುಭವಿಸಿದ ಅಸ್ಪಶ್ಯತೆಯನ್ನು ಎಷ್ಟು ಭಾರಿ ಇವರ ಪರ ಹೋರಾಟ ಮಾಡಿದ ಉದಾಹರಣೆಗಳು ಇದ್ದರೆ ಹೇಳಲಿ. ಈ ಮನುವಾದಿ ಸ್ವಾಮೀಜಿಗಳು ಅಸ್ಪಶ್ಯತೆ ಬಗೆಗೆ ಜಾಗೃತಿ ಮೂಡಿಸಿದ ಉದಾಹರಣೆ ಇದ್ದರೆ ನೀಡಲಿ. ಇದು ಯಾವುದನ್ನು ಮಾಡದ ಸ್ವಾಮೀಜಿಗಳು ಹಿಂದೂತ್ವವಾದಿಗಳು ತಮ್ಮ ಧರ್ಮಕ್ಕಾಗಿ ಆತ್ಮರತಿ ಅನುಭವಿಸುತ್ತಾರೆ ಹೊರತು ಧರ್ಮದ ಉಳಿವಿಗಾಗಿ ಮತಾಂತರ ತಡೆಯಲು ದಲಿತರ ಪರ ಹೋರಾಟಗಳು ಮಾಡಿದ ನಿದರ್ಶನ ಇಲ್ಲ.
ಆದರೆ ಮತಾಂತರ ನಿಷೇದ ಕಾಯ್ದೆ ತಂದು ಹಾಗೂ ಈ ಕಾಯ್ದೆ ವಾಪಸ್ಸು ಪಡೆಯಬಾರದು ಎಂದೂ ಸರ್ಕಾರಕ್ಕೆ ಸಂದೇಶ ನೀಡುವುದು ಇದು ಒಂದು ಸಾಧನೆ ಎಂದೂ ಬಿಂಬಿಸುಕೊಳ್ಳುವುದರ ಬಗ್ಗೆಇವರಿಗೆ ನಾಚಿಕೆ ಆಗಬೇಕು. ದಲಿತರ ಮೇಲೆ ಆಗುವ ದೌಜನ್ಯಗಳನ್ನು ವಿರೋಧಿಸುವ ಶಕ್ತಿ ಇಲ್ಲದ ಇವರಿಗೆ ಮತಾಂತರ ಬಗ್ಗೆ ಸಂಕಟ ಏಕೋ?
ತಮಗೆ ತಾಕ್ಕತು ಇದ್ದರೆ ದಲಿತರ ಮೇಲೆ ಆಗುವ ದೌಜನ್ಯ ತಡೆಯಲಿ, ಅಸ್ಪಶೃತೆಯನ್ನು ನಿವಾರಣೆ ಮಾಡುವ ಕಾರ್ಯಗಳನ್ನು ಮಾಡಿ ದಲಿತರ ಅಭಿಮಾನ ಪಡೆಯಬೇಕೆ ಹೊರತು ಸಂಕಟ ಪಡವುದು ಅಲ್ಲ / ವ್ಯಂಗ್ಯ ಮಾಡುವುದಲ್ಲ. ಇದೆಲ್ಲಾ ಅರ್ಥಹೀನ ಆಗುತ್ತದೆ. ಹಿಂದೂ ಪರ ಸಂಘಟನೆಗಳು ಹೀಗೆ ಮುಂದುವರೆದರೆ ಹಿಂದೂ ಧರ್ಮ ಅಲ್ಪಸಂಖ್ಯಾತ ಧರ್ಮದ ಲಿಸ್ಟ್ ನಲ್ಲಿ ಇರಬೇಕಾಗುತ್ತದೆ.
ಅದೇ ರೀತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವವರನ್ನು ಅಕ್ಕಿಗಾಗಿ ಹೋದವರು ಎಂದೂ ವ್ಯಂಗ್ಯ ಮಾಡುವುದು ಇದೆ. ಹಾಗಾದರೆ ಅದೇ ಅಕ್ಕಿಯನ್ನು ಕೊಟ್ಟು ಅವರ ಹೊಟ್ಟೆ ಹಸಿವು ಏಕೆ ತಡೆಯಲು ಆಗಲಿಲ್ಲ? ಅಕ್ಕಿಗಾಗಿ ಹೋಗುವರು ಎ೦ದು ವ್ಯಂಗ್ಯ ಮಾಡುವರಿಗೆ ಮಾನವೀಯತೆ ಇದೆಯಾ? ಬರೀ ವ್ಯಂಗ್ಯ ಮಾತುಗಳನ್ನು ಆಡಿಯೆ ಹಿಂದೂತ್ವವಾದಿಗಳು ಅತ್ಮರತಿ ಮಾಡಿಕೊಳ್ಳುವುದನ್ನು ಬಿಟ್ಟು ಮತಾಂತರಕ್ಕೆ ಕಾರಣಗಳೇನು ಎಂಬುದನ್ನುಅರಿತು ಅದನ್ನು ನಿವಾರಣೆ ಮಾಡುವ ಪ್ರಯತ್ನ ಹಿಂದೂತ್ವವಾದಿಗಳು / ಹಿಂದೂ ಧರ್ಮ ಸಂಘಟನೆಗಳು ಮಾಡಿದರೆ ಧರ್ಮ ಉಳಿಯುತ್ತದೆ.
ಇಲ್ಲದ ಪಕ್ಷದಲ್ಲಿ ಮುಂದೆ ಇದೇದೆ ರೀತಿ ಶ್ರೇಣಿಕೃತ ಜಾತಿ ವ್ಯವಸ್ಥೆಯ ಕೊನೆ ಸಾಲಿನಲ್ಲಿ ಬರುವರು ಮತಾಂತರ ಸಾಲಿನಲ್ಲಿ ನಿಂತರೆ ಇದೇ ದೇಶ ಬುದ್ಧ ನಾಡು ಆಗುವುದರಲ್ಲಿ ಅನುಮಾನ ಇಲ್ಲ ಎಂಬ ಸಂದೇಶವನ್ನು ಅರಿತುಕೊಳ್ಳಿ.
- N.S.ಈಶ್ವರಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲ್ಲೂಕ್




